Header Ads
Header Ads
Breaking News

ಲಂಡನ್ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ದುರಂತ, ನೂರು ಮನೆಗಳಲ್ಲಿ ಅಪಾರ ಹಾನಿ, ನಂದಿಸಲು ಹರಸಾಹಸ

ಲಂಡನ್ ನಗರದ ಜನವಸತಿಯ ಬಹುಮಡಿ ಕಟ್ಟಡದಲ್ಲಿ ಭೀಕರ ಬೆಂಕಿ ದುರಂತ ಸಂಭವಿಸಿದೆ. ಕಟ್ಟಡದಲ್ಲಿ ಹಲವು ಜನರು ಸಿಲುಕಿರುವ ಸಾಧ್ಯತೆ ಇದೆ.
ಲಂಡನ್ನ ಉತ್ತರ ಕೆನ್ಸಿಂಗ್ಟನ್ನಲ್ಲಿನ ಲಾಟಿಮರ್ ರಸ್ತೆಯ ಲ್ಯಾಂಕೆಸ್ಟರ್ ವೆಸ್ಟ್ ಎಸ್ಟೇಟ್’ನ ೨೪ ಮಹಡಿಯ ಅಪಾರ್ಟ್ಮೆಂಟ್ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ಕಟ್ಟಡದ ಒಳಗೆ ನೂರಾರು ಜನರಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ೪೦ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಹಾಗೂ ೨೦೦ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಕಟ್ಟಡದಲ್ಲಿ ೧೦೦ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳಿವೆ ಎಂದು ಅಧಿಕಾರಿಗಳು ಹೇಳಿದ್ದು, ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.

Related posts

Leave a Reply