Header Ads
Header Ads
Breaking News

ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿ. 25ನೇ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭ.

ಮಂಗಳೂರಿನ ಬಲ್ಮಠದ ಎಜೆ ಟವರ್‍ಸ್‌ನಲ್ಲಿರುವ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿಯ ೨೫ನೇ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭವು ನಡೆಯಿತು.ಕಾರ್ಯಕ್ರಮವನ್ನು ಕುಂಟಿಕಾನದಲ್ಲಿರುವ ಎಜೆ ಇನ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಆಡಿಟೋರಿಯಂನಲ್ಲಿ ಆಯೋಜಿಸಲಾಯಿತು.ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ ಬಿ. ಆರ್ ರವಿಕಾಂತೇ ಗೌಡರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿಮ್ಮ ನೋವನ್ನು ಉಪಶಮನ ಮಾಡುವುದು ದೊಡ್ಡ ವಿಷಯವಲ್ಲ.

ಆದರೆ ಇತರ ನೋವು ನಿವಾರಣೆ ಮಾಡುವುದು ಮನುಷ್ಯನ ದೊಡ್ಡ ಗುಣ ಎಂದರು.ನಂತರ ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ ಎ.ಜೆ ಶೆಟ್ಟಿಯವರು ಮಾತನಾಡಿ, ಫಿಸಿಯೋಥೆರಪಿ ಕಾಲೇಜನ್ನು 25 ವರ್ಷಗಳ ಹಿಂದೆ ಟ್ರಸ್ಟ್ ಅಡಿಯಲ್ಲಿ ಸ್ಥಾಪಿಸಲಾಗಿತ್ತು. ಇದೀಗ ಈ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಅಂದಿನಿಂದ ಅನೇಕ ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದರು ವೃತ್ತಿಪರ ಜೀವನದಲ್ಲಿದ್ದಾರೆ ಎಂದರು.ಈ ಸಂದರ್ಭದಲ್ಲಿ ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಡಾ ಸಂಜಯ್ ಈಪೆನ್ ಸ್ಯಾಮ್ಯುಯಲ್‌ರವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.ಇದೇ ಸಂದರ್ಭದಲ್ಲಿ ಕಾಲೇಜಿನ ಮ್ಯಾಗಜೀನ್‌ನ್ನು ಬಿಡುಗಡೆಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಪಿಆರ್‌ಒ ಅಭೀಷೇಕ್, ಲಕ್ಷ್ಮೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷರಾದ ಪ್ರಶಾಂತ್ ಶೆಟ್ಟಿ, ಆಶ್ರಿತ ಪಿ ಶೆಟ್ಟಿ, ಮತ್ತಿತ್ತರು ಉಪಸ್ಥಿತರಿದ್ದರು.

Related posts

Leave a Reply