Header Ads
Header Ads
Breaking News

ಲಯನ್ಸ್ ಸಂಸ್ಥೆಯಿಂದ ಸಮಾಜಮುಖಿ ಕಾರ್ಯಕ್ರಮ

ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ವತಿಯಿಂದ ಅಶಕ್ತರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಧನ ಸಹಾಯ ನೀಡುವ ಕಾರ್ಯಕ್ರಮ ಪುರಭವನದಲ್ಲಿ ನಡೆಯಿತು. ಲಯನ್ಸ್ ಕ್ಲಬ್ ಬ್ರಹ್ಮಗಿರಿಗೆ ಲಯನ್ಸ್ ಗವರ್ನರ್ ತಲ್ಲೂರು ಶಿವರಾಮ್ ಶೆಟ್ಟಿಯವರ ಅಧಿಕೃತ ಭೇಟಿಯ ಸಂದರ್ಬದಲ್ಲಿ ಸಹಾಯಧನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.ಅಶಕ್ತರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ 15ಮಂದಿಗೆ ಸಹಾಯಧನ ವಿತರಿಸಲಾಯಿತು. ಕಾರುಣ್ಯ ಆಶ್ರಮಕ್ಕೆ ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.

ಇದೇ ಸಂದರ್ಬದಲ್ಲಿ ಪತ್ರಿಕಾ ವಿತರಕ ಹರೀಶ್ ಭಟ್ , ಸಮಾಜಸೇವಕರಾದ ನಿತ್ಯಾನಂದ ಒಳಕಾಡು ಹಾಗೂ ತಾರನಾಥ ಮೆಸ್ತ್ ಇವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಲಯನ್ಸ್ ಸಂಸ್ಥೆಯ ಜಿಲ್ಲಾಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ ಎಲ್ಲರನ್ನು ಗೌರವಿಸಿ ಸಭೆ ಸಮಾರಂಭ ಮಾಡಿದಾಗ ಆ ಸಮಾರಂಭಗಳು ಯಶಸ್ವಿಯಾಗಲು ಸಾದ್ಯ.ಇಂದಿನ ಕಾರ್ಯಕ್ರಮದಲ್ಲೂ ಹಿರಿಯರನ್ನು ಗೌರವಿಸಿ ನಡೆಸಲಾಗಿದೆ. ಅಶಕ್ತರಿಗೆ ವಿದ್ಯಾರ್ಥಿಗಳಿಗೆ ನೆರವು ನೀಡಲಾಗಿದೆ.ಈ ಮೂಲಕ ನಿರಂತರವಾಗಿ ಲಯನ್ಸ್ ಸಂಸ್ಥೆ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದೆ ಎಂದರು.

Related posts

Leave a Reply