Header Ads
Header Ads
Header Ads
Breaking News

ಲವ್‌ಜಿಹಾದ್, ಮತಾಂತರದ ವಿರುದ್ಧ ಸಂಕಲ್ಪ ಸಮಾವೇಶ ಸೆ.೧೦ರಂದು ಪುತ್ತೂರಿನ ಪಾಲ್ತಾಡಿಯಲ್ಲಿ ಆಯೋಜನೆ

 
ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಹೆಚ್ಚುತ್ತಿರುವ ಲವ್ ಜಿಹಾದ್ ಹಾಗೂ ಮತಾಂತರದ ವಿರುದ್ಧ ಜನಜಾಗೃತಿಗಾಗಿ ಸಂಕಲ್ಪ ಸಮಾವೇಶವನ್ನು ಸೆಪ್ಟಂಬರ್ ೧೦ ರಂದು ಪುತ್ತೂರಿನ ಪಾಲ್ತಾಡಿಯಲ್ಲಿ ಆಯೋಜಿಸಲಾಗಿದೆ ಎಂದು ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯ ರಾಕೇಶ್ ಕೆಡಿಂಜೆ ಹೇಳಿದರು.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ಪಾಲ್ತಾಡಿಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರಿಗೆ ದೂರು ನೀಡಿದರೂ, ಇಂದಿನವರೆಗೂ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಈ ಎಲ್ಲಾ ವಿಚಾರಗಳು ಈ ಸಂಕಲ್ಪ ಸಮಾವೇಶದಲ್ಲಿ ಚರ್ಚೆಯಾಗಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

Related posts

Leave a Reply