
ಲವ್ ಜಿಹಾದ್ ಪ್ರಕರಣವನ್ನು ಕಡಿವಾಣ ಹಾಕಲು ರಾಜ್ಯಸರ್ಕಾರ ಕಾನೂನು ರೂಪಿಸಬೇಕೆಂದು ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಒತ್ತಾಯಿಸಿದರು. ಈ ಕುರಿತು ಮಂಗಳೂರಿನ ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು , ಮುಗ್ದ ಅಮಾಯಕ ಹಿಂದು ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವುದು ಇಡೀ ಹಿಂದೂ ಸಮಾಜಕ್ಕೆ ಆತಂಕವನ್ನುಂಟು ಮಾಡಿದೆ.ಇತ್ತೀಚೆಗೆ ನಡೆದ ಮೂರ್ನಾಲ್ಕು ಪ್ರಕರಣಗಳು ಸಾಕ್ಷಿಯಾಗಿದೆ. ವ್ಯವಸ್ಥಿತ ಗುಂಪೊ0ದು ಈ ರೀತಿಯ ಕೃತ್ಯವನ್ನು ಮಾಡುತ್ತಿದೆ.ಈ ಕುರಿತು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ರು. ಇನ್ನುಲವ್ ಜಿಹಾದ್ ಪ್ರಕರಣ ನಡೆದಾಗ ಬಜರಂಗದಳ ಕಾರ್ಯಕರ್ತರು ತಡೆದು ಅವರನ್ನು ಕಾನೂನಿನ ಮುಖಾಂತರ ಪೊಲೀಸ್ ಒಪ್ಪಿಸುವ ಕೆಲಸ ಮಾಡುತ್ತಿದೆ. ಕೆಲವೊಂದು ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಸುಳ್ಳು ಕೇಸುನ್ನು ದಾಖಲಿಸಲಾಗುತ್ತಿದೆ. ಈ ಕೂಡಲೇ ಕೇಸು ಹಿಂಪಡೆಯಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಹ ಸಂಚಾಲಕ್ ಮುರಳಿ ಕೃಷ್ಣ ಹಸಂತಡ್ಕ,ಬಜರಂಗದಳ ವಿಭಾಗ ಸಂಚಾಲಕ್ ಭುಜಂಗ ಕುಲಾಲ್, ಜಿಲ್ಲಾ ಸಂಚಾಲಕ್ ಶ್ರೀಧರ್ ತೆಂಕಿಲ, ಜಿಲ್ಲಾ ಸಾಪ್ತಾಹಿಕ್ ಬಜರಂಗದಳ ದೀಪಕ್ ಮರೋಳಿ, ಜಿಲ್ಲಾ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಳ್ಳ ಉಪಸ್ಥಿತರಿದ್ದರು.