

ನಮ್ಮ ಸಿನೆಮಾ ಮುಂಬೈ ಟು ಬಟ್ಕಳ್ದ ಬಗ್ಗೆ ಏನು ಗೊತ್ತಿಲ್ಲದವರು ಮತ್ತು ನಮ್ಮ ಸಿನೆಮಾದ ನಿರ್ದೇಶಕರಾದ ಇಸ್ಮಾಯಿಲ್ ಮೂಡುಶೆಡ್ಡೆಯವರ ಏಳಿಗೆಯನ್ನು ಸಹಿಸಲಾಗದ ಕೆಲವು ಕಿಡಿಗೇಡಿಗಳು ನಮ್ಮ ಸಿನೆಮಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಸುದ್ಧಿ ಹರಡಿಸಿ ಹಿಂದೂ ಸಂಘಟನೆಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಸಿನೆಮಾದ ಖಳನಾಯಕ ಪ್ರಾಣೇಶ್ ಶೆಟ್ಟಿ ಹೇಳಿದರು.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಮುಂಬೈ ಟು ಬಟ್ಕಳ್ದ ಬಗ್ಗೆ ಏನು ಗೊತ್ತಿಲ್ಲದವರು ಮತ್ತು ನಮ್ಮ ಏಳಿಗೆಯನ್ನು ಸಹಿಸಲಾಗದ ಕೆಲವು ಕಿಡಿಗೇಡಿಗಳು ಈ ಕೃತ್ಯವನ್ನು ಮಾಡುತ್ತಿದ್ದಾರೆ. ‘ಲವ್ ಜಿಹಾದ್’ ಎನ್ನುವ ಪದವನ್ನು ಬಳಸುವ ಮೂಲಕ ಹಿಂದೂ ಸಂಘಟನೆಗಳನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾನೂನು ರೀತಿಯ ಹೋರಾಟವನ್ನು ನಾವು ಮಾಡುತ್ತಿದ್ದೇವೆ ಆದಷ್ಟು ಬೇಗ ಆರೋಪಿಗಳು ಯಾರೆಂದು ಕಂಡು ಹಿಡಿಯುತ್ತೇವೆ ಎಂದು ಹೇಳಿದರು.ಬಳಿಕ ಚಿತ್ರದ ನಾಯಕ ನಟ ಪ್ರಜ್ಞೇಶ್ ಶೆಟ್ಟಿ ಮಾತನಾಡಿ ಸಂಘಟನೆಯ ಹುಡುಗ ಹಾಗೂ ನಾನು ಲವ್ ಜಿಹಾದ್ಗೆ ಸಪೋರ್ಟ್ ಮಾಡಿಲ್ಲ ಇನ್ನೂ ಮಾಡುವುದಿಲ್ಲ. ಈ ಚಿತ್ರದಲ್ಲಿ ಲವ್ ಜಿಹಾದ್ ಕೋಮುವಾದ ಏನು ಇಲ್ಲ. ಇದೊಂದು ಅಪ್ಪಟ ದೇಶಪ್ರೇಮದ ಚಿತ್ರ ಎಂದು ಹೆಳಿದರು.
ಇದೇ ವೇಳೆ ಚಿತ್ರದ ನಟಿ ಕಾವ್ಯ ಅಂಚನ್ ಮಾತನಾಡಿ, ಈ ಚಿತ್ರದಲ್ಲಿ ನಾವು ಬುರ್ಕಾ ಹಾಕಿ ನಟಿಸಿದ್ದೇನೆಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಈ ಚಿತ್ರದಲ್ಲಿ ಹಿಂದೂ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರ ಶುದ್ದ ಸುಳ್ಳು ಎಂದು ಹೇಳಿದರು.ಆನಂತರ ಇಸ್ಮಾಯಿಲ್ ಮೂಡುಶೆಡ್ಡೆಯವರ ನಿರ್ದೇಶನದ ಭೋಜರಾಜ್ ಎಂಬಿಬಿಎಸ್ ಚಿತ್ರದ ನಟಿ ಶೀತಲ್ ನಾಯಕ್ ಮಾತನಾಡಿ, ನಿರ್ದೇಶಕರಾದ ಇಸ್ಮಾಯಿಲ್ ಮೂಡುಶೆಡ್ಡೆಯವರ ವಿರುದ್ಧ ಅವಹೇಳಕಾರಿ ಹೇಳಿಕೆ ಖಂಡನೀಯ. ಅವರು ಹೇಗೆ ಎಂದು ನನಗೆ ತಿಳಿದಿದೆ. ಯಾಕೆಂದರೆ ಅವರ ನಿರ್ದೇಶನದಲ್ಲಿ ನಾನು ನಟಿಸಿದ್ದೇನೆ. ಎಂದು ಹೇಳಿದರು.
ಈ ಸಂದರ್ಭ ಕುಡ್ಲಾ ಸಿನಿಮಾಸ್ನ ನಿರ್ದೆಶಕರಾದ ಶರತ್ ಬೈಲೂರು ಉಪಸ್ಥಿತರಿದ್ದರು.