Header Ads
Header Ads
Header Ads
Breaking News

ಲವ್ 4 ಪಾವ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ವಿನೂತನ ಕಾರ್ಯಕ್ರಮ

ಅನಾಥ ನಾಯಿ ಬೆಕ್ಕುಗಳಿಗೆ ಅಕ್ಕರೆಯ ಆಶ್ರಯ ಕಲ್ಪಿಸುವ ವಿನೂತನ ಕಾರ್ಯಕ್ರಮವನ್ನು ಲವ್ 4 ಪಾವ್ಸ್ ಚಾರಿಟೇಬಲ್ ಟ್ರಸ್ಟ್‍ನವರು ಆಯೋಜಿಸಿಕೊಂಡು ಬರುತ್ತಿದ್ದಾರೆ. ಇಂದು ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ದತ್ತು ಕೊಡುವ ಕಾರ್ಯಕ್ರಮವು ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯ ಪಾರ್ಕಿಂಗ್ ಬಳಿ ಹಮ್ಮಿಕೊಳ್ಳಲಾಗಿತ್ತು.


ಅನಾಥ ನಾಯಿ ಬೆಕ್ಕುಗಳಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಮಂಗಳೂರು ನಗರದ ವಿವಿಧೆಡೆ ಈ ಶಿಬಿರಗಳನ್ನು ಲವ್ 4 ಪಾವ್ಸ್ ಚಾರಿಟೇಬಲ್ ಟ್ರಸ್ಟ್ ಆಯೋಜಿಸಿಕೊಂಡು ಬಂದಿದೆ. ರಸ್ತೆಗಳಲ್ಲಿ ವಾಹನಗಳ ಅಡಿಗೆ ಸಿಲುಕಿ ಜೀವ ಕಳೆದುಕೊಳ್ಳಬೇಕಾಗಿದ್ದ ಬೀದಿಬದಿ ಗಳಲ್ಲಿ ಆಹಾರವಿಲ್ಲದೆ ಹಸಿವಿನಿಂದ ನರಳಬೇಕಾಗಿದ್ದ ಮುಗ್ಧ ಜೀವಿಗಳಿಗೆ ನೆಲೆಯೊಂದನ್ನು ಕಲ್ಪಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ.
ಈ ಸಂದರ್ಭ ಮಾತನಾಡಿದ ಟ್ರಸ್ಟಿ ಉಷಾ ತಾರನಾಥ್ ಅವರು ಇದೀಗ 9ನೇ ದಿನದ ಶಿಬಿರ ನಡೆಯುತ್ತಿದೆ.ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಮಾತ್ರವಲ್ಲದೆ ಜನರಿಗೆ ಶಿಬಿರದ ಬಗ್ಗೆ ಮನವರಿಕೆ ಆಗಿದೆ. ಹೆಣ್ಣು ನಾಯಿ ಮರಿಗಳನ್ನು ದತ್ತು ಸ್ವೀಕಾರ ಮಾಡುತ್ತಿದ್ದಾರೆ. ದೇಸಿ ನಾಯಿಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.

ಇಂದು ನಡೆದ ದತ್ತುಕೊಡು ಶಿಬಿರಲ್ಲಿ ಬೆಕ್ಕು ಮತ್ತು ನಾಯಿಯ ಮರಿಗಳಿದ್ದು, ಅನೇಕ ಪ್ರಾಣಿ ಪ್ರೀಯರು ಶಿಬಿರದ ಸದುಪಯೋಗವನ್ನು ಪಡೆದುಕೊಂಡು ಹೋದರು.

ಈ ಸಂದರ್ಭ ಟ್ರಸ್ಟಿ ವೀಣಾ ಮೋಹನ್, ವೆಲಿಟಾ, ರೀಟಾ, ಶೋಭಿತಾ, ಬಿಂದು, ತ್ರಿಶಾ ಮತ್ತಿತರರು ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *