Header Ads
Breaking News

ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡ ಬಲ್ನಾಡ್ ಗ್ರಾಮಸ್ಥರು

ಪುತ್ತೂರು: ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲೇ ಕೂರಲು ಬೋರ್. ಹಾಗೆಂದು ಹೊರಗೆ ಬಂದು ಅಲ್ಲಿಲ್ಲ ತಿರುಗಾಡುವಂತಿಲ್ಲ. ಇಂಥದೊಂದು ಸಂದರ್ಭದಲ್ಲಿ ಸಮಾಜಮುಖಿಯಾಗಿ ಟೈಮ್‍ಪಾಸ್ ಮಾಡುವ ಮೂಲಕ ಪುತ್ತೂರಿನ ಬಲ್ನಾಡ್ ಗ್ರಾಮಸ್ಥರು ಮಾದರಿಯಾಗಿದ್ದಾರೆ. ಇಲ್ಲಿನ ಹಲವು ಮನೆಗಳಿಗೆ ಸೇರಿದ ಸುಮಾರು 15ರಿಂದ 20ರಷ್ಟು ಯುವಕರು ಮೆಸ್ಕಾಂ ಸಿಬ್ಬಂದಿಗಳ ಜತೆ ಸೇರಿಕೊಂಡು ವಿದ್ಯುತ್ ಲೈನ್‍ಗಳಿಗೆ ತಾಗುವ ಮರದ ಗೆಲ್ಲುಗಳನ್ನು ತೆರವು ಮಾಡುವ ಮೂಲಕ ಸಮಾಜ ಸೇವೆ ಮಾಡಿದ್ದಾರೆ. ಬಲ್ನಾಡ್ ಭಾಗದಲ್ಲಿ ಸುಮಾರು 600ರಷ್ಟು ಮನೆಗಳಿದ್ದು, 70ರಷ್ಟು ವಿದ್ಯುತ್ ಪರಿವರ್ತಕಗಳಿವೆ. ಎಚ್‍ಟಿ ಲೈನ್ ಮತ್ತು ಎಲ್‍ಟಿ ಲೈನ್‍ಗಳಿಗೆ ತಾಗಿಕೊಂಡಿರುವ ಮರದ ಗೆಲ್ಲುಗಳನ್ನು ಕಡಿದು ವಿದ್ಯುತ್ ಲೈನ್ ಸುಗಮಗೊಳಿಸುವುದು ಕೂಡ ಮೆಸ್ಕಾಂ ಪಾಲಿಗೆ ಸವಾಲೇ ಸರಿ. ಇದಕ್ಕೆಂದೇ ನುರಿತ ಮಾನ್ಸೂನ್ ಗ್ಯಾಂಗ್‍ಮನ್‍ಗಳನ್ನು ಇದಕ್ಕಾಗಿ ಬಳಸಬೇಕಾಗುತ್ತದೆ. ಆದರೆ ಈ ಬಾರಿ ಇಲ್ಲಿನ ಗ್ರಾಮಸ್ಥರೇ ಮೆಸ್ಕಾಂ ಜತೆ ಕೈಜೋಡಿಸಿದ್ದಾರೆ.  ಇನ್ನು ಎಲ್ಲವನ್ನೂ ಇಲಾಖೆಯೇ ಮಾಡಲಿ ಎಂಬ ಮನೋಭಾವ ತಾಳದೆ ಇದು ನಮ್ಮೆಲ್ಲರ ಕೆಲಸ ಎಂಬ ಭಾವನೆಯಿಂದ ಅವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ ಎಂದು ಪವರ್‍ ಮ್ಯಾನ್ ಶಂಕರ್ ಮತ್ತು ಅಶ್ರಫ್ ಹೇಳಿದರು.

Related posts

Leave a Reply

Your email address will not be published. Required fields are marked *