Header Ads
Breaking News

ಲಾಕ್‍ಡೌನ್ ಸಮಯವನ್ನು ಸದುಪಯೋಗಪಡಿಸಿದ ಯುವಕರ ತಂಡ : ಶೌಚಾಲಯ ನಿರ್ಮಿಸಲು ಮುಂದಾದ ಸೇವಾ ಸಂಸ್ಥೆಯ ಯುವಕರು

ಮೂಡುಬಿದಿರೆ : ಲಾಕ್‍ಡೌನ್ ಸಂದರ್ಭವನ್ನು ಸದುಪಯೋಗಪಡಿಸಿಕೊಂಡಿರುವ ಕಲ್ಲಮುಂಡ್ಕೂರು ಸೇವಾ ಸಂಸ್ಥೆಯ ಯುವಕರು ಮೂಡುಬಿದ್ರೆಯ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ನೆಲ್ಲಕ್ಕೆ ಕಿನ್ನಿಪದವಿನಲ್ಲಿರುವ ವಿಧವೆ ಶಾಂತಾ ನಾಯ್ಕ್ ಅವರಿಗೆ ಸ್ನಾನಗೃಹ ಮತ್ತು ಶೌಚಾಲಯವನ್ನು ನಿರ್ಮಿಸಲು ಶ್ರಮದಾನ ಮಾಡಿದರು. ವಿಧವೆ ಶಾಂತಾ ನಾಯ್ಕ್ ಅವರು ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ನೆಲ್ಲಕ್ಕೆಯಲ್ಲಿ ಜೀವನ ನಡೆಸುತ್ತಿದ್ದರು. ಗಂಡು ದಿಕ್ಕಿಲ್ಲದ ಈ ಕುಟುಂಬವು ಬಡತನದಲ್ಲಿ ಜೀವನ ನಡೆಸುತ್ತಿದ್ದು ಮೂಲಭೂತ ಸೌಕರ್ಯವಾಗಿರುವ ಸ್ನಾನಗೃಹ ಮತ್ತು ಶೌಚಾಲಯವನ್ನು ಹೊಂದಿರಲಿಲ್ಲ. ಈ ಹಿನ್ನೆಲೆ ಮೂಡುಬಿದಿರೆಯ “ಯುವ ಮಿಲನ” ತಂಡ ಹಾಗೂ “ಕಲ್ಲಮುಂಡ್ಕೂರು ಸೇವಾ ಸಂಸ್ಥೆ” ತಂಡದ 23 ಸದಸ್ಯರು ಹಾಗೂ ಅನೇ ದಾನಿಗಳ ನೆರವಿನಿಂದ ಪಾಲ್ಗೊಂಡು ಶೌಚಾಲಯ ಗುಂಡಿ ಹಾಗೂ ಸ್ನಾಹಗೃಹವನ್ನು ನಿರ್ಮಿಸಲು ಶ್ರಮದಾನವನ್ನು ಮಾಡುವ ಮೂಲಕ ಬಡಕುಟುಂಬಕ್ಕೆ ನೆರವಾಗಿದ್ದಾರೆ.

Related posts

Leave a Reply

Your email address will not be published. Required fields are marked *