Header Ads
Header Ads
Breaking News

ಲಾಠಿ ಹಿಡಿವ ಕೈಯಲ್ಲಿ ಗ್ಲೌಸ್, ಅಪರಾಧಿಗಳ ಎಳೆದೊಯ್ಯುವ ಕೈಯಲ್ಲಿ ಚೀಲ..!

 

ಇದೇ ನಪ್ಪಾ ಬೀಚ್‌ನಲ್ಲೊಂದಿಷ್ಟು ಜಾಲಿಯಾಗಿ ಓಡಾಡುವಾ ಅಂದ್ರೆ.. ಪೊಲೀಸರ ದಂಡೇ ಇದೆ.. ಯಾರಿಗೆ ಗ್ರಹಚಾರ ಕಾದಿದೆಯೋ.. ಯಾರು ಅಪರಾಧ ಮಾಡಿ ಕಡಲ ಕಿನಾರೆಯಲ್ಲಿ ಬಚ್ಚಿಟ್ಟುಕೊಂಡಿದ್ದಾರೆ ಎನ್ನುವ ಅಂತೆಕಂತೆಗಳು.

ಹೌದು.. ಪೊಲೀಸರು ಕಡಲ ಕಿನಾರೆಗೆ ಬಂದಿದ್ದು ನಿಜ.. ಆದರೆ ಕಳ್ಳಕಾಕರ ಹಿಡಿಯೋದಕ್ಕೆ ಅಲ್ಲ.. ಬದಲಿಗೆ ಕೈಗೆ ಗ್ಲೌಸ್ ಹಾಕಿ ಬಾಯಿಗೆ ಮಾಸ್ಕ್ ಸಿಕ್ಕಿಸಿಕೊಂಡು, ಸಮುದ್ರ ದಂಡೆಯಲ್ಲಿ ಹುಡುಕಾಟ ನಡೆಸಿದ್ದು ತ್ಯಾಜ್ಯಕ್ಕಾಗಿ..ಪೊಲೀಸರಿಗೆ ಸಮಾಜಿಕ ಕಾಳಜಿ ಇದೆ.. ಕೈಮ್‌ಗಷ್ಟೇ ಸೀಮಿತವಲ್ಲ.. ಎನ್ನೋದು ಕುಂದಾಪುರ ಪೊಲೀಸರು ಪ್ರೂವ್ ಮಾಡಿದ್ದಾರೆ.. ಅಧಿಕಾರಿ ಸಿಬ್ಬಂದಿ ಮೇಲೆ ಸೆಲ್ಯೂಟ್ ಯವುದೂ ಇಲ್ಲದೆ.. ಕಡಲ ಕಿನಾರೆ ಸ್ವಚ್ಛಮಾಡಿದ್ದಿದೆಯಲ್ಲಾ ಅದಕ್ಕೆ ಪ್ರವಾಸಿಗರು ಫಿದಾ..

 

ಕ್ಲೀನ್ ಕುಂದಾಪುರ ಸಮಾನಮನಸ್ಕ ಅರವತ್ತು ಎಪ್ಪತ್ತು ಮಂದಿ ಭಾನುವಾರ ಬಂತೆಂದರೆ ರಜೆ ಮಜಾಕ್ಕೆ ದಿನ ವ್ಯರ್ಥಮಾಡದೆ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ.. ಸಮುದ್ರ ಕಿನಾರೆ ಸ್ವಚ್ಛ ಮಾಡೋದು ಅವರ ಕಾರ್‍ಯಕ್ರಮದಲ್ಲಿ ಒಂದು ಪ್ರಮುಖ. ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸ್ವಚ್ಚತಾ ಅಭಿಯಾನಕ್ಕೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಇನ್ನೋದಕ್ಕೆ ಪೊಲೀಸರು. ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್, ಸಿಪಿಐ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ವಿವಿಧ ಪೊಲೀಸ್ ಠಾಣೆ ಸಿಬ್ಬಂದಿಗಳು ಕುಂದಾಪುರ ಕೋಡಿ ಸೀ ವಾಕ್ ಬಳಿಯ ಸಮುದ್ರ ಕಿನಾರೆ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.

ಕುಂದಾಪುರ ಎಎಸ್ಪಿ ಕಚೇರಿ, ವೃತ್ತನಿರೀಕ್ಷಕರ ಕಚೇರಿ, ಕುಂದಾಪುರ ನಗರ ಠಾಣೆ, ಸಂಚಾರಿ ಠಾಣೆ, ಕುಂದಾಪುರ ಗ್ರಾಮಾಂತರ, ಅಮಾಸೆಬೈಲು, ಕೊಲ್ಲೂರು ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಯ ೩೦ಕ್ಕೂ ಅಧಿಕ ಅಧಿಕಾರಿ ಸಿಬ್ಬಂದಿಗಳು ಜೊತೆಗೂಡಿದ್ದು ೧೦೦ಕ್ಕೂ ಅಧಿಕ ಜನರಿಂದ ಬೀಚ್ ಬಳಿ ಸ್ವಚ್ಛತಾ ಕೆಲಸ ನಡೆದಿದ್ದು ಒಂದೂವರೆ ಲೋಡ್‌ಗೂ ಅಧಿಕ ತ್ಯಾಜ್ಯವನ್ನು ಪುರಸಭೆಗೆ ಹಸ್ತಾಂತರಿಸಲಾಯಿತು.

ಕೊಲ್ಲೂರು ಠಾಣೆ ಪಿಎಸ್‌ಐ ಶಿವಕುಮಾರ್, ಎಎಸ್‌ಐ ಗೋವಿಂದರಾಜು, ರೆಡ್ ಕ್ರಾಸ್ ಸಂಸ್ಥೆಯ ಶಿವರಾಮ ಶೆಟ್ಟಿ, ಐಎಂಎ ಮಂಗಳೂರು ಕಾರ್ಯದರ್ಶಿ ಡಾ. ರಶ್ಮೀ ಕುಂದಾಪುರ, ಗೋಪಾಡಿ ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಉಪಾಧ್ಯಕ್ಷೆ ಕಲ್ಪನಾ ಭಾಸ್ಕರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್ ಸಂಚಾಲಕ ಭರತ್ ಬಂಗೇರ, ಸಮಾಜ ಸೇವಕ ಗಣೇಶ್ ಪುತ್ರನ್, ಗೀತಾನಂದ ಫೌಂಡೇಶನ್ ನ ರವಿಕಿರಣ್, ಎಫ್‌ಎಸ್‌ಎಲ್ ಸಂಸ್ಥೆಯ ದಿನೇಶ ಸಾರಂಗ, ಆಡಿಟರ್ ಅರುಣ್ ಕುಮಾರ್, ಬ್ಯಾಂಕ್ ಮೆನೇಜರ್ ಶಶಿಧರ್ ಎಚ್.ಎಸ್., ಇಂಜಿನಿಯರ್ ಕೌಶಿಕ್ ಯಡಿಯಾಳ, ನಿಸರ್ಗ ಗೆಳೆಯರು ಸಿದ್ದಾಪುರದ ಪದಾಧಿಕಾರಿಗಳು ಮೊದಲಾದವರಿದ್ದರು.

 

Related posts

Leave a Reply

Your email address will not be published. Required fields are marked *