Header Ads
Breaking News

ಲಾಯಿಲ : ವಿಕಲಚೇತನರ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮ

ವಿಕಲಚೇತನರೆಂದರೆ ಅವರು ಶಾಪಗ್ರಸ್ತರಲ್ಲ. ಎಲ್ಲರಂತೆ ಅವರಲ್ಲೂ ಪ್ರತಿಭೆಗಳಿರುತ್ತವೆ. ಆ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಡಾ. ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯಿಂದ ಇದೆಲ್ಲಾ ಸಾಧ್ಯವಾಗಿದೆ. ಮುಂದೆಯೂ ಇದನ್ನು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಉಜಿರೆ ಗ್ರಾ. ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ ಹೇಳಿದರು.ಬ್ರೈಟ್ ಇಂಡಿಯಾ ಮದ್ದಡ್ಕ ವತಿಯಿಂದ ಲಾಯಿಲದ ಜಾಗೃತಿ ಸೌಧದ ಆವರಣದಲ್ಲಿ ನಡೆದ ವಿಕಲಚೇತನರ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದಲ್ಲಿ ತಾಲೂಕಿನ 7 ಫಲಾನುಭವಿಗಳಿಗೆ ವಾಕರ್, ವೀಲ್ ಚೇರ್ ವಿತರಿಸಲಾಯಿತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ, ಬ್ರೈಟ್ ಇಂಡಿಯಾ ಮದ್ದಡ್ಕದ ಅಧ್ಯಕ್ಷ ಸ್ಥಾನದ ಹಿನ್ನಲೆಯಲ್ಲಿ ಮಾರ್ಗದರ್ಶನ ನೀಡಿದರು.ವೇದಿಕೆಯಲ್ಲಿ ಉಜಿರೆ ಗ್ರಾ. ಪಂ ಅಧ್ಯಕ್ಷೆ ಪುಷ್ಪಾವತಿ ಆರ್ ಶೆಟ್ಟಿ, ಕಡಿರುದ್ಯಾವರ ಗ್ರಾ. ಪಂ ಸದಸ್ಯೆ ಸಾವಿತ್ರಿ, ಇಂದಬೆಟ್ಟು ಪಂ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಜೋಸೆಫ್ ಹಾಗೂ ಬ್ರೈಟ್ ಇಂಡಿಯಾ ಮದ್ದಡ್ಕ ಸಂಸ್ಥೆಯ ಕೋಶಾಧಿಕಾರಿ ಶಿಶುಪಾಲ ಪೂವಣಿ ಉಪಸ್ಥಿತರಿದ್ದರು. ಎಸ್.ಡಿ.ಎಂ ವ್ಯಸನಮುಕ್ತ ಕೇಂದ್ರದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಿಸ್ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ಜರುಗಿತು.ಶಿಶುಪಾಲ ಜೈನ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು, ಬಿ. ಪಿ. ವಜ್ರನಾಬಯ್ಯ ವಂದಿಸಿದರು.

Related posts

Leave a Reply

Your email address will not be published. Required fields are marked *