Header Ads
Header Ads
Breaking News

ಲಾರಿ ಬೈಕ್ ಡಿಕ್ಕಿ, ಯುವಕ ಸ್ಥಳದಲ್ಲೆ ಸಾವು: ಶಿರೂರು ಚೆಕ್ ಪೋಸ್ಟ್ ಬಳಿ ಘಟನೆ

ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಶಿರೂರು ಚೆಕ್ ಪೋಸ್ಟ್ ಬಳಿ ನಡೆದಿದೆ. ಬೈಕ್ ನಲ್ಲಿದ್ದ ಶಿರೂರು ಕೆಳಪೇಟೆಯ ನಿವಾಸಿ ಸುಭಾಶ್ ಳದಲ್ಲೆ ಮೃತಪಟ್ಟವರು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುಭಾಶ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ. ಮಾರ್ಕೆಟ್ ಬೀಡಾ ಅಂಗಡಿಯಲ್ಲಿ ಟಿ ಕುಡಿದು ವಾಪಾಸ್ಸು ಹೋಗುವ ವೇಳೆ ಈ ಘಟನೆ ನಡೆದಿದೆ. ಸಹಸವಾರ ಚಂದ್ರ ಅವರಿಗೆ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಇದೆ ಸ್ಥಳದಲ್ಲಿ ಅಪಘಾತ ನಡೆದಿದ್ದು ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದರು.ರಸ್ತೆ ಅವ್ಯವಸ್ಥೆ ಸತತ ಅಪಘಾತಗಳಿಗೆ ಕಾರಣವಾಗಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ.ಬೈಂದೂರು ಪೋಲಿಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲಾರಿ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

 

Related posts

Leave a Reply