Header Ads
Header Ads
Breaking News

ಲಾರಿ ಮತ್ತು ತುಫಾನ್ ವ್ಯಾನ್ ಢಿಕ್ಕಿ. ಐದು ಮಂದಿ ಸ್ಥಳದಲ್ಲೇ ಸಾವು.

ಮಂಜೇಶ್ವರ: ಪಾಲಕ್ಕಾಡಿನಲ್ಲಿ ಮನೆ ಒಕ್ಕಲು ಸಮಾರಂಭ ಕಳೆದು ಊರಿಗೆ ಮರಳುತಿದ್ದ ೧೮ ಮಂದಿ ಸಂಚರಿಸುತಿದ್ದ ತೂಫಾನ್ ವಾಹನಕ್ಕೆ ರಾಷ್ಟ್ರೀಯ ಹೆದ್ದಾರಿ ೬೬ರ ಉಪ್ಪಳ ಸಮೀಪದ ನಯಬಝಾರ್‌ನಲ್ಲಿ ಎದುರಿನಿಂದ ಬರುತಿದ್ದ ಲಾರಿಯೊಂದು ಡಿಕ್ಕಿ ಹೊಡೆದು ಉಂಟಾದ ಭೀಕರ ಅಪಘಾತದಲ್ಲಿ ತೂಫಾನ್ ವಾಹನದಲ್ಲಿದ್ದ ಐದು ಮಂದಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಉಳಿದ ೧೩ ಮಂದಿ ಗಂಭೀರಾವಸ್ಥೆಯಲ್ಲಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಮೃತರನ್ನು ಉಳ್ಳಾಲ ಮುಕ್ಕಚ್ಚೇರಿ ನಿವಾಸಿಗಳಾದ ಇಂತಿಯಾಝ್ (40) ಮುಸ್ತಾಕ್ (41) ತೂಮಿನಾಡು ನಿವಾಸಿಗಳಾದ ಬೀಫಾತಿಮ (71) ಅಸ್ಮಾ 30) ಕೆ ಸಿ ರೋಡ್ ಅಜಿನಡ್ಕ ನಿವಾಸಿ ನಸೀಮ (36) ಎಂದು ಗುರುತಿಸಲಾಗಿದೆ.ಗಾಯಗೊಂಡವರ ಪೈಕಿ ಕೆ ಸಿ ರೋಡ್ ಅಜಿನಡ್ಕ ನಿವಾಸಿ ಸೌದ(29) ಮಕ್ಕಳಾದ ಶಾಹಿದ್ (14). ಅಬ್ದುಲ್ ರಹ್ಮಾನ್ (12), ನಾಸಿಫ (10), ಖದೀಜ ಅಮಲ್ (8) ಆಬಿದ್ ( ಆರು ತಿಂಗಳು), ಫವಾಝ್ (8), ಸಕೀನಾ (7), ಅಮ್ಮಾರ್ (6), ಶಿಯಾ (6), ಫಾತಿಮ (1), ಸಲ್ಮಾನ್ ಫಾರಿಸ್ (7),ತಸೀಹ (8) ಎಂಬಿವರು ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ.ಅಪಘಾತದಲ್ಲಿ ಗಂಭೀರಾವಸ್ಥೆಯಲ್ಲಿರುವ ಸೌಧಳ ಅಕ್ಕ ರುಖಿಯಾ ಎಂಬವರ ಪಾಲಕ್ಕಾಡಿನಲ್ಲಿರುವ ಮನೆ ಒಕ್ಕಲು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಊರಿಗೆ ಮರಳುತಿದ್ದ ದಾರಿ ಮಧ್ಯೆ ಎದುರಿನಿಂದ ಬರುತಿದ್ದ ಲಾರಿಯ ಚಕ್ರ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಲಾರಿ ಕುಟುಂಬ ಸಂಚರಿಸುತಿದ್ದ ವಾಹನಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಶವಶರೀರವನ್ನು ಮಂಗಲ್ಪಾಡಿ ಶವಗರದಲ್ಲಿರಿಸಲಾಗಿದೆ. ಘಟನಾ ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಲುಪಿದ್ದಾರೆ.

Related posts

Leave a Reply