Header Ads
Header Ads
Breaking News

ಲಾಲ್ ಗೋಯಲ್‌ರ ೬೩ನೆ ಹುಟ್ಟುಹಬ್ಬದ ಸಂಭ್ರಮ ಮೂಡಬಿದ್ರೆ ಪಂಡಿತ್ ರೆಸಾರ್ಟ್‌ನಲ್ಲಿ ಕಾರ್ಯಕ್ರಮ

 

ಮೂಡಬಿದ್ರೆ ಪಂಡಿತ್ ರೆಸಾರ್ಟ್ ಮಾಲಕ ಲಾಲ್ ಗೋಯಲ್‌ರ ೬೩ನೆ ಹುಟ್ಟುಹಬ್ಬದ ಸಂಭ್ರಮ ಹಾಗೂ ಮಥೂರಾದಲ್ಲಿ ಲಾಲ್ ಗೋಯಲ್‌ರ ಆಡಳಿತದಲ್ಲಿರುವ ಕಿಶೋರಿ ರಮಣ ಕಾಲೇಜಿನ ೫೦ನೆ ಸ್ಥಾಪನಾ ದಿನದ ಸಂಭ್ರಮಾಚರಣೆ ಮೂಡಬಿದ್ರೆಯ ಪಂಡಿತ್ ರಿಸಾರ್ಟ್‌ನಲ್ಲಿ ನಡೆಯಿತು.

ಈ ವೇಳೆ ಮಥುರಾ ಕಿಶೋರಿ ರಮಣ್ ಕಾಲೇಜಿನ ಪ್ರಾಂಶುಪಾಲ ನರೇಂದ್ರ ಸಿಂಗ್ ಮಾತನಾಡಿ ಅಲ್ಲಿಯ ಶಿಕ್ಷಣ ಮತ್ತು ಇಲ್ಲಿಯ ಶಿಕ್ಷಣ ವ್ಯವಸ್ಥೆಯ ಅವಲೋಕನ ನಡೆಸಿದರು. ಈ ವೇಳೆ ಶಾಸಕ ಅಭಯಚಂದ್ರ ಜೈನ್ ಉದ್ಯಮಿ ಹಾಗೂ ಶಿಕ್ಷಣ ಪ್ರೇಮಿಯಾಗಿ ಜೈನ್ ಲಾಲ್ ಗೋಯಲ್‌ರ ಕಾರ್ಯನಿರ್ವಹಣೆಯ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ಇನ್ನು ಮೂಡಬಿದ್ರೆ ಜೈನ್‌ಮಠ ಸ್ವಾಮೀಜಿ ಚಾರುಕೀರ್ತಿ ಭಟ್ಟಾಚಾರ್ಯ ಆಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಈಶ್ವರ ದೇವಸ್ಥಾನದ ಈಶ್ವರ್ ಭಟ್,ಅಲಂಕಾರು ಚರ್ಚ್‌ನ ಧರ್ಮಗುರು ಫಾದರ್ ಸುನೀಲ್ ವೇಗಸ್ ,ಇನ್‌ಕಮ್ ಟ್ಯಾಕ್ಸ್ ಪ್ರಿನ್ಸಿಪಲ್ ಕಮೀಷನರ್ ನರೋತ್ತಮ್ ಮಿಶ್ರಾ, ದ.ಕ. ಜಿಲ್ಲಾ ಎಡಿಶನಲ್ ಎಸ್ಪಿ ಡಾ. ವೇದಮೂರ್ತಿ ಮತ್ತಿತರು ಉಪಸ್ಥಿತರಿದ್ದರು.ಈ ವೇಳೆ ಮಥೂರಾ ಕಿಶೋರ್ ರಮಣ್ ಕಾಲೇಜಿನ ಮೊದಲ ಬ್ಯಾಚ್‌ನಲ್ಲಿ ಎಸ್ಸೆಸೆಲ್ಸಿ ಪೂರೈಸಿದ ೨೫ ವಿದ್ಯಾರ್ಥಿಗಳನ್ನು ಮೂಡಬಿದ್ರೆ ಪಂಡಿತ್ ರಿಸಾರ್ಟ್‌ಗೆ ಕರೆಸಲಾಗಿದ್ದು, ಸ್ಥಾಪನಾ ದಿನದ ಸಂಭ್ರಮದಲ್ಲಿ ಅವರನ್ನು ಗೌರವಿಸಲಾಯಿತು.

Related posts

Leave a Reply