Header Ads
Header Ads
Breaking News

ಲುವಾಂಡಾ ಲೋಕದ ದುಬಾರಿ ನಗರ, ಬೆಂಗಳೂರು ಅಗ್ಗದ ನಗರಗಳಲ್ಲಿ ಒಂದು

ಅಂಗೋಲಾದ ರಾಜಧಾನಿ ಲುವಾಂಡಾ ಜಗತ್ತಿನಲ್ಲೇ ಅತ್ಯಂತ ದುಬಾರಿ ನಗರ ಎಂದು ಸಮೀಕ್ಷೆಯೊಂದು ತಿಳಿಸಿದೆ. ಮೆರ್ಸೆರ್ ಕನ್ಸಲ್ಟಿಂಗ್ ಗ್ರೂಪ್ ನಡೆಸಿದ ೨೩ನೇ ವಾರ್ಷಿಕ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.
ಡಾಲರ್ ಎದುರು ಅಂಗೋಲಾದ ಸ್ಥಳೀಯ ಕರೆನ್ಸಿ ಕ್ವಾಂಝಾ ಮೌಲ್ಯ ಕುಸಿತವಾಗಿದ್ದರೂ ಲುವಾಂಡಾ ?ದುಬಾರಿ ನಗರದ ಪಟ್ಟ ಪಡೆದುಕೊಂಡಿದೆ.
ಜೀವನ ವೆಚ್ಚ ಕುರಿತ ವರದಿಯಲ್ಲೂ ಸತತ ಮೂರು ವರ್ಷಗಳ ಕಾಲ ಲುವಾಂಡಾ ?ನಗರ ಪ್ರಥಮ ಸ್ಥಾನ ಪಡೆದಿತ್ತು. ಮೊದಲ ಸ್ಥಾನದಲ್ಲಿದ್ದ ಹಾಂಗ್ಕಾಂಗ್ ನಗರ ಈಗ ಎರಡನೇ ಸ್ಥಾನ ಪಡೆದಿದೆ. ಆದರೆ, ಏಷ್ಯಾದಲ್ಲೇ ಅತ್ಯಂತ ದುಬಾರಿ ನಗರವಾಗಿದೆ. ಈ ನಗರದಲ್ಲಿ ವಾಸಿಸುವ ಮನೆಗಳು ದುಬಾರಿಯಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ೨೦೦ ನಗರಗಳಲ್ಲಿ ಈ ಸಮೀಕ್ಷೆ ನಡೆಸಿದ್ದು, ವಸತಿ, ಆಹಾರ, ಸಾರಿಗೆ ಮತ್ತು ಮನರಂಜನೆ ಸೇರಿದಂತೆ ೨೦೦ ಅಂಶಗಳನ್ನು ಹೋಲಿಕೆ ಮಾಡಲಾಗಿದೆ.
ಕಳೆದ ಬಾರಿ ೫ನೇ ಸ್ಥಾನದಲ್ಲಿದ್ದ ಟೋಕಿಯೊ ಈ ಸಲ ಮೂರನೇ ಸ್ಥಾನ ಪಡೆದಿದೆ. ಯೆನ್ ಮೌಲ್ಯ ಮತ್ತು ವಸತಿ ವಹಿವಾಟಿನಲ್ಲಿ ಹೆಚ್ಚಳವಾಗಿರುವುದು ಇದಕ್ಕೆ ಕಾರಣವಾಗಿದೆ. ಸಿಂಗಪುರ ೫ನೇ ಸ್ಥಾನದಲ್ಲಿದ್ದರೆ, ನ್ಯೂಯಾರ್ಕ್ ಒಂಬತ್ತನೇ ಸ್ಥಾನ ಪಡೆದಿದೆ.
ಸಮೀಕ್ಷೆಯನ್ನು ವಿವಿಧ ದೇಶಗಳು ಮತ್ತು ಉದ್ಯಮಗಳು ಗಂಭೀರವಾಗಿ ಪರಿಗಣಿಸಿವೆ. ವಿದೇಶಗಳಿಗೆ ತಮ್ಮ ನೌಕರರನ್ನು ಕಳುಹಿಸುವ ಸಂದರ್ಭದಲ್ಲಿ ಈ ಅಂಶಗಳನ್ನು ಪರಿಗಣಿಸುತ್ತವೆ ಎಂದು ವಿಶ್ಲೇಷಿಸಲಾಗಿದೆ. ರಷ್ಯಾದ ಕೆಲವು ನಗರಗಳು ಮತ್ತಷ್ಟು ದುಬಾರಿಯಾಗಿವೆ. ಕಳೆದ ವರ್ಷ ೫೩ನೇ ಸ್ಥಾನದಲ್ಲಿದ್ದ ಮಾಸ್ಕೊ ನಗರ ಈ ಬಾರಿ ೧೪ನೇ ಸ್ಥಾನದಲ್ಲಿದೆ. ಸೇಂಟ್ ಪೀಟರ್ಸ್ಬರ್ಗ್ ೧೧೬ರಿಂದ ೩೬ನೇ ಸ್ಥಾನಕ್ಕೇರಿದೆ. ಲುವಾಂಡಾ, ಹಾಂಗ್ಕಾಂಗ್, ಟೋಕಿಯೊ, ಜ್ಯೂರಿಚ್, ಸಿಂಗಪುರ ಮೊದಲ ಐದು ದುಬಾರಿ ನಗರಗಳು.
ವಲಸಿಗರಿಗೆ ಮುಂಬೈ ದೇಶದಲ್ಲಿ ದುಬಾರಿ ನಗರವಾಗಿದ್ದು, ಜಗತ್ತಿನ ಪ್ರಮುಖ ನಗರಗಳ ಪಟ್ಟಿಯಲ್ಲಿ ೫೭ನೇ ಸ್ಥಾನ ಪಡೆದಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಜಾಗತಿಕ ಪಟ್ಟಿಯಲ್ಲಿ ನವದೆಹಲಿ ೯೯, ಚೆನ್ನೈ ೧೩೫, ಬೆಂಗಳೂರು ೧೬೬ ಹಾಗೂ ಕೋಲ್ಕತ್ತ ೧೮೪ನೇ ಸ್ಥಾನದಲ್ಲಿವೆ.

Related posts

Leave a Reply