Header Ads
Header Ads
Breaking News

ಲೈಟ್‍ಫಿಶಿಂಗ್ ವಿರುದ್ಧ ಭುಗಿಲೆದ್ದ ಆಕ್ರೋಶ: ಮಂಗಳೂರು ದಕ್ಕೆಯಲ್ಲಿ ನಾಡದೋಣಿ ಮೀನುಗಾರರ ಪ್ರತಿಭಟನೆ

ಮಂಗಳೂರು : ಸಮುದ್ರದಲ್ಲಿ ಬೆಳಕನ್ನು ಹಾಯಿಸಿ ಮೀನುಗಾರಿಕೆ ನಡೆಸಲು ಮುಂದಾಗಿರುವ ಪರ್ಸಿನ್ ಬೋಟುಗಳ ವಿರುದ್ಧ ಟ್ರಾಲ್‍ಬೋಟ್ ಹಾಗೂ ಗಿಲ್‍ನೆಟ್ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಬೃಹತ್ ಸಂಖ್ಯೆಯಲ್ಲಿ ಸೇರಿ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬೆಳಕನ್ನು ಹಾಯಿಸಿ ಮೀನುಗಾರಿಕೆ ನಡೆಸಲು ಸರಕಾರ ಹೇರಿರುವ ನಿಷೇಧವನ್ನು ಉಲ್ಲಂಘಿಸಿ ಪರ್ಸಿನ್ ಬೋಟ್‍ನ ಮೀನುಗಾರರು ಸೋಮವಾರದಿಂದ ಮೀನುಗಾರಿಕೆ ನಡೆಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಟ್ರಾಲ್‍ಬೋಟ್ ಹಾಗೂ ಗಿಲ್‍ನೆಟ್ ಮೀನುಗಾರರು ಇದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸಿದರು. ಪರ್ಸಿನ್ ಬೋಟುಗಳಲ್ಲಿನ ಮೀನುಗಳನ್ನು ಖರೀದಿಸದಂತೆ ಒತ್ತಾಯಿಸಿದ ಪ್ರತಿಭಟನಾಕಾರರು ಬಳಿಕ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯೆದುರು ಪ್ರತಿಭಟನೆ ನಡೆಸಿದರು.

ಜೊತೆಗೆ ಮೆರವಣಿಗೆಯ ಮೂಲಕ ಸಾಗಿ ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.

Related posts

Leave a Reply