Header Ads
Breaking News

ಲೈನ್ ಸೇಲ್ ವಾಹನ ಪಲ್ಟಿ : ರಾ.ಹೆ. 66ರ ಕಲ್ಲಾಪು ಬಳಿ ನಡೆದ ಘಟನೆ

ಉಳ್ಳಾಲ: ಲೈನ್ ಸೇಲ್ ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಪಲ್ಟಿಯಾಗಿರುವ ಘಟನೆ ನಡೆದಿದೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲೈನ್ ಸೇಲ್ ವಾಹನ ಕ್ಕೆ, ಲಾರಿಯೊಂದು ಅಡ್ಡಬಂದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ. ಆ ಲಾರಿಗೆ ಸಮೀಪದಲ್ಲೇ ಇರುವ ಔಟ್ ಡೋರ್ ಸೊಲ್ಯೂಷನ್ಸ್ ವಾಣಿಜ್ಯ ಸಂಸ್ಥೆಯವರು ಹೆದ್ದಾರಿಯಲ್ಲಿ ಇಟ್ಟಿರುವ ತಡೆಯನ್ನು ತಪ್ಪಿಸುವಾಗ ರಿಟ್ಝ್ ಕಾರು ಬಲಭಾಗಕ್ಕೆ ಚಲಿಸಿದೆ. ಇದರ ಪರಿಣಾಮವಾಗಿ ಲಾರಿ ಚಾಲಕ ಕಾರನ್ನು ತಪ್ಪಿಸಲು ಬಲಭಾಗಕ್ಕೆ ವಾಹನವನ್ನು ಒಮ್ಮಿಂದೊಮ್ಮೆಲೆ ತಿರುಗಿಸಿದಾಗ ಅತಿವೇಗವಾಗಿ ಬರುತ್ತಿದ್ದ ಲೈನ್ ಸೇಲ್ ವಾಹನ ಢಿಕ್ಕಿ ಹೊಡೆದು ಡಿವೈಡರ್ ಏರಿ ಮಗುಚಿಬಿದ್ದಿದೆ. ಸಂಜೆ ವೇಳೆಯೂ ವಾಹನಗಳು ಈ ಭಾಗದಲ್ಲಿ ಅಧಿಕವಾಗಿ ಇರುವುದರಿಂದ ಸ್ಥಳದಲ್ಲಿ ಅಪಘಾತಗಳನ್ನು ಆಹ್ವಾನಿಸುವಂತಾಗಿದೆ. ಘಟನೆ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.

Related posts

Leave a Reply

Your email address will not be published. Required fields are marked *