Header Ads
Header Ads
Breaking News

ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆದ ಗುರುವಂದನಾ ಕಾರ್ಯಕ್ರಮ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯಿಂದ ಕಾರ್ಯಕ್ರಮ

ಧರ್ಮಸ್ಥಳ ಸಮೀಪದ ಕನ್ಯಾಡಿಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನಮ್ ಮತ್ತು ಬಂಟ್ವಾಳ ತಾಲೂಕು ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ವತಿಯಿಂದ ಲೋಕಕಲ್ಯಾಣಾರ್ಥವಾಗಿ ಸೀತಾರಾಮ ಕಲ್ಯಾಣೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನಡೆಯಿತು.ಬಂಟ್ವಾಳ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಬಳಿಯ ಮೈದಾನದ ಆತ್ಮಾನಂದ ಸರಸ್ವತಿ ವೇದಿಕೆಯ ಬಳಿ ಅಲಂಕೃತ ವೇದಿಕೆಯಲ್ಲಿ ಸೀತಾರಾಮರ ಮೂರ್ತಿಯನ್ನು ಇರಿಸಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪುರೋಹಿತರಾದ ವೇದಮೂರ್ತಿ ಲಕ್ಷ್ಮೀಪತಿ ಗೋಪಾಲಾಚಾರ್ಯ ನೇತೃತ್ವದಲ್ಲಿ ಕಲ್ಯಾಣೋತ್ಸವ ನಡೆಯಿತು.

ಈ ಸಂದರ್ಭ ಸೇರಿದ್ದ ಸಹಸ್ರಾರು ಭಕ್ತರು ಭಕ್ತಿಭಾವದಿಂದ ಕಲ್ಯಾಣೋತ್ಸವವನ್ನು ಕಣ್ತುಂಬಿಕೊಂಡರು.ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಪುರಪ್ರವೇಶ ಬೆಳಿಗ್ಗೆ ೮ ಗಂಟೆಗೆ ನಡೆಯಿತು. ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ಶ್ರೀಗಳನ್ನು ಸ್ವಾಗತಿಸಿಕೊಳ್ಳಲಾಯಿತು. ಬಳಿಕ ಮೆರವಣಿಗೆಯ ಮೂಲಕ ಶ್ರೀಗಳನ್ನು ಕಾರ್ಯಕ್ರಮ ನಡೆಯುವ ಆತ್ಮಾನಂದ ಸರಸ್ವತಿ ವೇದಿಕೆಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆ ತರಲಾಯಿತು. ವಾದ್ಯ, ಚೆಂಡೆ, ಕೊಂಬುಗಳ ಹಿಮ್ಮೇಳ, ಬಣ್ಣದ ಕೊಡೆ, ಗೊಂಬೆ ಕುಣಿತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ಬರೀ ಡಿಗ್ರಿ ಪಡೆದರೆ ವ್ಯಕ್ತಿ ಅಕ್ಷರಸ್ಥನಾಗುತ್ತಾನೆ ಹೊರತು ವಿದ್ಯಾವಂತನಾಗುವುದಿಲ್ಲ. ಜಗತನ್ನು ಅಭ್ಯಸಿಸುವಂತಹ ಜವಬ್ದಾರಿ ಮೂಡಿದಾಗ ವ್ಯಕ್ತಿ ವಿದ್ಯಾವಂತನಾಗುತ್ತಾನೆ ಎಂದರು.
ಸಂಸ್ಕಾರದ ಕೊರತೆಯಿಂದ ನಾವು ಭ್ರಮೆಯಲ್ಲಿ ಬದುಕುತ್ತಿದ್ದೇವೆ, ಓಟು ಮತ್ತು ನೋಟಿನ ಕೆಟ್ಟ ಪ್ರವಾಹದ ಕಡೆ ಮನುಷ್ಯನ ಮನಸ್ಸು ಓಡುತ್ತಿದೆ. ಪರೋಪಕಾರಿ ಕಾರ್ಯ ಮಾಡಲು ದೇವರು ಈ ಮನುಷ್ಯ ಜನ್ಮವನ್ನು ನೀಡಿದ್ದು ಅದನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯಲು ಪ್ರಯತ್ನಸಬೇಕು ಎಂದರು.