Header Ads
Header Ads
Breaking News

ಲೋಕದಲ್ಲಿ ಭಾರತ ನಂಬರ್ ವನ್, ಜನಸಂಖ್ಯೆಯಲ್ಲಿ ಮುಟ್ಟಲು ಇನ್ನು ಏಳೇ ವರುಷ

ಇನ್ನು ಏಳೇ ಏಳು ವರ್ಷಗಳಲ್ಲಿ ಭಾರತ ಜನಸಂಖ್ಯೆಯಲ್ಲಿ ಜಗತ್ತಿನ ನಂಬರ್ವನ್ ದೇಶ ಎಂಬ ಹೆಗ್ಗಳಿಕೆಗೆ ಭಾಜನವಾಗಲಿದೆ!
ಜಗತ್ತಿನ ಜನಸಂಖ್ಯೆ ಕುರಿತು ಅಧ್ಯಯನ ನಡೆಸಿರುವ ವಿಶ್ವಸಂಸ್ಥೆ ತನ್ನ ಜಾಗತಿಕ ಜನಸಂಖ್ಯಾ ನಿರೀಕ್ಷಾ ಪಟ್ಟಿಯಲ್ಲಿ ಇಂಥ ಕೆಲವು ಅಂಶಗಳನ್ನು ಹೇಳಿದೆ. ಸದ್ಯ ಜನಸಂಖ್ಯೆಯಲ್ಲಿ ಚೀನ ನಂ. ೧ ಆಗಿದ್ದು, ಮುಂದಿನ ೭ ವರ್ಷಗಳಲ್ಲಿ ಈ ಸ್ಥಾನ ಭಾರತದ್ದಾಗಲಿದೆ. ಸದ್ಯ ಚೀನದ ಜನಸಂಖ್ಯೆ ಅಂದಾಜು ೧೪೪ ಕೋಟಿ ಇದ್ದು ಭಾರತದ ಜನಸಂಖ್ಯೆ ಅಂದಾಜು ೧೩೦ ಕೋಟಿ ಇದೆ. ಮುಂದಿನ ೧೦ ವರ್ಷಗಳಲ್ಲಿ ಭಾರತವು ಚೀನವನ್ನು ಮೀರಿಸಲಿದ್ದು, ಭಾರತದ ಜನಸಂಖ್ಯೆ ೧೬೦ ಕೋಟಿ ಆಗಲಿದೆ. ೨೦೬೧ರ ಬಳಿಕ ಇದರ ಪ್ರಮಾಣ ಇಳಿಕೆಯಾಗಲಿದೆ ಎನ್ನಲಾಗಿದೆ.
ಭಾರತ ಈಗ ಯುವಕರ ದೇಶ. ಸದ್ಯ ೨೭ ವಯಸ್ಸಿನವರು ಭಾರತದಲ್ಲಿ ಅತ್ಯಧಿಕವಿದ್ದು, ೨೦೬೦ರ ವೇಳೆಗೆ ೪೦ ವಯಸ್ಸಿನವರು ಹೆಚ್ಚಿರಲಿದ್ದಾರೆ. ೨೧೦೦ರ ವೇಳೆಗೆ ೪೦ರ ವಯಸ್ಸಿನವರು ಹೆಚ್ಚಿರಲಿದ್ದು, ಕ್ರಮೇಣ ಯುವಕರ ದೇಶ ಎಂಬ ಹಣೆ ಪಟ್ಟಿಯನ್ನು ಭಾರತ ಕಳೆದುಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಕೆಲಸ ಮಾಡುವವರು ಹೆಚ್ಚು, ಅವಲಂಬಿತರ ಪ್ರಮಾಣ ಕಡಿಮೆಯಾಗಲಿದೆ. ೧೯೭೦ರ ದಶಕದಲ್ಲಿ ಭಾರತದಲ್ಲಿ ಶೇ. ೪೪.೧೭ ಅವಲಂಬಿತರು ಇದ್ದರೆ, ಶೇ. ೫೫.೮೩ ಕೆಲಸ ಮಾಡುವವರು ಇದ್ದರು. ೨೦೨೦-೨೫ರ ವೇಳೆಗೆ ಶೇ. ೩೨.೨೫ ಅವಲಂಬಿತರ ಪ್ರಮಾಣ, ಶೇ. ೬೭.೭೫ ಕೆಲಸ ಮಾಡುವವ
ಈಗ ಭಾರತದಲ್ಲಿ ಪ್ರತಿ ತಾಯಂದಿರಿಗೆ ಮಕ್ಕಳ ಸಂಖ್ಯೆ ೨:೩ ಅನುಪಾತಕ್ಕೆ ಇಳಿದಿದೆ. ಜತೆಗೆ ಮುಂದಿನ ದಿನಗಳಲ್ಲಿ ಯುವ ತಾಯಂದಿರೇ ಇರಲಿದ್ದಾರೆ. ೨೦೨೫ರ ವೇಳೆಗೆ ಮಕ್ಕಳ ಸಂಖ್ಯೆ ಪ್ರತಿ ತಾಯಿಗೆ ೨:೧ರ ಅನುಪಾತಕ್ಕೆ ಇಳಿಯಲಿದೆ. ಮಕ್ಕಳ ವಿದ್ಯಾಭ್ಯಾಸ, ತಾಯಂದಿರ ವಿದ್ಯಾಭ್ಯಾಸದ ಮಟ್ಟವೂ ಏರಲಿದೆ. ಭಾರತದಲ್ಲಿ ಲಿಂಗಾನುಪಾತವೂ ಏರಲಿದೆ ಎನ್ನಲಾಗಿದೆ. ೨೦೨೦ರ ಬಳಿಕ ಪುರುಷರ ಸಂಖ್ಯೆ ಇಳಿಕೆಯಾಗಲಿದೆ. ಮಹಿಳೆಯರ ಸಂಖ್ಯೆಗೆ ಸರಿಸಮವಾಗಿ ಗಂಡು ಮಕ್ಕಳ ಸಂಖ್ಯೆಯೂ ಇರಲಿದೆ ಎನ್ನಲಾಗಿದೆ.

Related posts

Leave a Reply