Header Ads
Header Ads
Breaking News

ಲೋಕದ ಅತಿ ಕಠಿಣ ರೇಸ್ ಅಕ್ರಾಸ್ ಅಮೆರಿಕ, ಮೊದಲ ಬಾರಿಗೆ ದಾಖಲೆ ಬರೆದ ಭಾರತದ ಶ್ರೀನಿವಾಸ್, ಅಮಿತ್

ವಿಶ್ವದ ಅತ್ಯಂತ ಕಠಿಣ ಸ್ಪರ್ಧೆಯಾಗಿರುವ ರೇಸ್ ಅಕ್ರಾಸ್ ಅಮೆರಿಕ ಸೈಕ್ಲಿಂಗ್ ಸ್ಪರ್ಧೆಯ ವೈಯಕ್ತಿಕ ವಿಭಾಗದಲ್ಲಿ ಭಾರತದ ಇಬ್ಬರು ಸ್ಪರ್ಧಿಗಳು ವಿನೂತನ ದಾಖಲೆ ಬರೆದಿದ್ದಾರೆ.
೪,೯೦೦ ಕಿಲೋಮೀಟರ್ಸ್ ದೂರದ ಸ್ಪರ್ಧೆಯನ್ನು ಲೆಫ್ಟಿನೆಂಟ್ ಕರ್ನಲ್ ಶ್ರೀನಿವಾಸ್ ಗೋಕುಲನಾಥ್ ಮತ್ತು ಅಮಿತ್ ಸಮರ್ಥ್ ಅವರು ಪೂರ್ಣಗೊಳಿಸಿದ್ದಾರೆ. ಅದರೊಂದಿಗೆ ಮೊದಲ ಬಾರಿ ಈ ಸಾಧನೆ ಮಾಡಿದ ಭಾರತದ ಸ್ಪರ್ಧಿಗಳೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ೩೦ ವರ್ಷಗಳಿಂದ ಈ ರೇಸ್ ನಡೆಯುತ್ತಿದೆ. ಇಲ್ಲಿಯವರೆಗೆ ಕೇವಲ ಮೂವರು ಭಾರತೀಯ ಸ್ಪರ್ಧಿಗಳು ಮಾತ್ರ ಭಾಗವಹಿಸಿದ್ದರು. ಅದರಲ್ಲಿ ಯಾರೂ ಗುರಿ ಮುಟ್ಟಿರಲಿಲ್ಲ. ಸಮೀಮ್ ರಿಜ್ವಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮೊದಲ ಭಾರತೀಯ ಸೈಕ್ಲಿಸ್ಟ್. ಆದರೆ ಈ?ಬಾರಿ ಮಹಾರಾಷ್ಟ್ರದ ಶ್ರೀನಿವಾಸ್ ಮತ್ತು ಅಮಿತ್ ಅವರು ಗುರಿ ತಲುಪಿ ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನ ಪಡೆದರು.
ಹನ್ನೊಂದು ದಿನಗಳು, ಹದಿನೆಂಟು ಗಂಟೆಗಳು ಮತ್ತು ನಲವತ್ತಯಿದು ನಿಮಿಷಗಳವರೆಗೆ ನಡೆದ ಸ್ಪರ್ಧೆಯಲ್ಲಿ ಭಾರತದ ಸೈಕ್ಲಿಸ್ಟ್ಗಳು ಭಾಗವಹಿಸಿದ್ದರು. ಪೆಸಿಫಿಕ್ ಕರಾವಳಿಯಿಂದ ಸ್ಪರ್ಧೆಯು ಆರಂಭವಾಗಿತ್ತು. ಮೊಜಾವ್ ಮರುಭೂಮಿ, ಅರಿದಾ ಅರಿಜೊನಾ, ಕೋಲ್ಡ್ ಮೌಂಟೇನ್ಸ್, ಕೊಲರಾಡೊ, ಮಧ್ಯ ಅಮೆರಿಕ, ಅಪ್ಲಾಚಿಯಾನ್ ಮೌಂಟೆನ್ಸ್ ಮೂಲಕ ಸಾಗಿದ ಸ್ಪರ್ಧಿಗಳು ಪೂರ್ವ ಪೆಸಿಫಿಕ್ ಕರಾವಳಿಯ ಅನ್ನಾಪೊಲೀಸ್ ತಲುಪಿದರು. ಶ್ರೀನಿವಾಸ್ ಅವರು ಮಹಾರಾಷ್ಟ್ರದ ನಾಸಿಕ್ ನಗರದವರು. ಅವರು ಸಹ್ಯಾದ್ರಿ ತಂಡವನ್ನು ಪ್ರತಿನಿಧಿಸುತ್ತಾರೆ. ಅಮೆರಿಕದ ರೇಸ್ನಲ್ಲಿ ಅವರು ೪ ಮೆನ್ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಶ್ರೀನಿವಾಸ್ ಎಂಟು ದಿನಗಳಲ್ಲಿ ಸ್ಪರ್ಧೆಯನ್ನು ಪೂರ್ಣಗೊಳಿಸಿದರು. ಅವರು ಪ್ರತಿದಿನವೂ ಹತ್ತು ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿ ಗುರಿ ತಲುಪಿದರು. ನಾಗಪುರದ ಅಮಿತ್ ಅವರು ಇದೇ ಮೊದಲ ಬಾರಿಗೆ ಈ ರೇಸ್ನಲ್ಲಿ ಸ್ಪರ್ಧಿಸಿದ್ದರು. ಅವರು ಈ ಹಿಂದೆ ಟ್ರಯಥ್ಲಾನ್ನಲ್ಲಿ ಐರನ್ಮ್ಯಾನ್ ಆಗಿದ್ದರು. ಮ್ಯಾರಾಥಾನ್ನಲ್ಲಿಯೂ ಸ್ಪರ್ಧಿಸಿದ್ದರು.

Related posts

Leave a Reply