Header Ads
Header Ads
Breaking News

ಲೋಕನಾಡು ಫ್ರೆಂಡ್ಸ್ ನೇತೃತ್ವದಲ್ಲಿ ಕೆಸರ್‌ದ ಗೊಬ್ಬು ಕಾರ್ಯಕ್ರಮ

 ಅದು ಸೌಂಧರ್ಯಭರಿತ ಹಳ್ಳಿಯ ಸೊಗಡನ್ನು ವರ್ಣರಂಜಿತವಾಗಿ ತೋರಿಸಿದಂತಹ ಕಾರ್ಯಕ್ರಮ..ವಯಸ್ಸಿನ ಭೇಧವಿಲ್ಲದೆ ಸಂಭ್ರಮಿಸುತ್ತಿದ್ದ ಜನ.. ಕರಾವಳಿ ಭಾಗದ ಜನಪದ ಆಟಗಳನ್ನು ಎಳೆ ಎಳೆಯಾಗಿ ತೊರಿಸಿದಂತಹ ಅತ್ಯದ್ಫುತ ಕಾರ್ಯಕ್ರಮ.. ಅರೆ ಇದ್ಯಾವ ಕಾರ್ಯಕ್ರಮದ ಕುರಿತು ನಾವು ಹೇಳ್ತಾ ಇದ್ದೀವಿ ಅಂತ ನೀವು ಯೋಚನೆ ಮಾಡ್ತಾ ಇದ್ದೀರಾ ಹಾಗಿದ್ರೆ ಈ ಸ್ಟೋರಿ ನೋಡಿಹೌದು .. ಇತ್ತೀಚ್ಚೆಗೆ ಹಳ್ಳಿ ಪ್ರದೇಶಗಳೂ ಕೂಡ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹಳ್ಳಿಯ ಸಂಪ್ರದಾಯಿಕ ಆಚರರಣೆಗಳು, ಆಟೋಟಗಳು ಮರೆಮಾಚುತ್ತಿರುವ ಬೇಸರದ ಸಂಗತಿ ಈ ಹಿನ್ನೆಲೆಯಲ್ಲಿಯೇ ಕರಾವಳಿ ಪ್ರದೇಶದ ಜನಪದ ಆಚರಣೆಗಳನ್ನು ಉಳಿಸಿ ಇಂದಿನ ಯುವ ಪೀಳಿಗೆಗೂ ತುಳುನಾಡ ಸಂಸ್ಕೃತಿ , ಆಚರಣೆಗಳನ್ನು ತಿಳಿಸುವ ಕಾರಣದಿಂದ ಲೋಕನಾಡು ಫ್ರೆಂಡ್ಸ್ ನಿಡಿಗಲ್, ಉಜಿರೆ, ಗುರಿಪಳ್ಳ, ಕನ್ಯಾಡಿ ಗ್ರಾಮಸ್ಥರ ನೇತೃತ್ವದಲ್ಲಿ2ನೇ ವರ್ಷದ ತುಳುವೆರೆನ ಕೆಸರ್‌ದ ಗೊಬ್ಬು ಉಜಿರೆ ಕನ್ಯಾಡಿಯ ಏಣೆರು ಪಲ್ಕೆಯ ಕೊರಗಪ್ಪ ಕುಂಬಾರ ಮತ್ತು ನಾರಾಯಣ ಕುಂಬಾರ ಇವರ ಗದ್ದೆಯಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಿತು. ಲೋಕನಾಡು ಪ್ರೆಂಡ್ಸ್ ತಂಡವು ಇದೀಗಾಗಲೇ ಉಜಿರೆ ಪರಿಸರದಾದ್ಯಂತ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಸಾಮಾಜಿಕ ಕಾರ್ಯಕ್ರಮದ ಅಂಗವಾಗಿ ಹಲವಾರು ಬಡರೋಗಿಗಳಿಗೆ ಧನಸಹಾಯ, ರಕ್ತದಾನ ಶಿಬಿರ ಆಯೋಜನೆ ಹಾಗೂ ರಕ್ತ ದಾನ, ಕೆ.ಎಂ.ಸಿ ಹೆಲ್ತ್ ಕಾರ್ಡ್ ಯೋಜನೆಯ ವ್ಯವಸ್ಥೆಗೆ ಸಹಕಾರ, ಸ್ವಚ್ಚತೆಯ ಕುರಿತು ಜಾಗೃತಿ ಕಾರ್ಯಗಾರ ಹಾಗೂ ಇನ್ನಿತರ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ಲೋಕನಾಡು ಪ್ರೆಂಡ್ಸ್ ತಂಡದ್ದು , ಇದೀಗ ತುಳು ಭಾಷೆ, ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸುವ ನಿಟ್ಟಿನಲ್ಲಿ ಕೆಸರ್‌ಡ್ ಒಂಜಿ ದಿನ ದಿನ ಕಾರ್ಯಕ್ರಮ ನಡೆಸಲಾಯಿತು. ಎಲ್ಲೆಲ್ಲೂ ನೋಡಿದ್ರು ಹಚ್ಚ ಹಸಿರು, ಹುಲ್ಲಿನ ಮನೆ, ಕರಾವಳಿ ಭಾಗದ ಹಳ್ಳಿಯ ಊಟ, ಹಳ್ಳಿಯ ಸುವಾಸನೆ.. ಇದನ್ನೆಲ್ಲಾ ಆಸ್ವಾಸಿದುವುದೇ ಒಂದು ಸಂಭ್ರಮ.ಕೆ.ಮಂಜುನಾಥ ಶೆಟ್ಟಿ ನಿಡಿಗಲ್ ಮುಂದಾಳತ್ವದಲ್ಲಿ ನಡೆದ ಕೆಸರ್‌ಡ್ ಕಾರ್ಯಕ್ರಮಕ್ಕೆ ವಿಧಾನ ಪರಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ಆಗಮಿಸಿ ಅದ್ಘುತ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನಿಸಲಾಯಿತು. ನಂತರ ನಡೆದಿದ್ದು ಮಕ್ಕಳ …. ಪುರುಷರ ಹಾಗೂ ಮಹಿಳೆಯರ ವಿವಿಧ ಆಟೋಟ ಸ್ಫರ್ದೆಗಳು. ಪುರುಷರಿಗಾಗಿ ಹಗ್ಗ ಜಗ್ಗಾಟ, ಕಂಬಳ ಓಟ, ಕಬ್ಬಡ್ಡಿ, ನಿಧಿ ಹುಡುಕುವ ಸ್ಫರ್ಧೆ, ತುಳು ಎದುರುಕತೆ, ಹಿಂದೆ ಹಿಂದೆ ಓಡುವ ಆಟ , ಮಹಿಳೆಯರಿಗಾಗಿ ಮಡಿಕೆ ಒಡೆಯುವುದು, ಹಿಂದೆ ಹಿಂದೆ ಓಡುವುದು, ಹಗ್ಗ ಜಗ್ಗಾಟ, ಬಾಲ್ ಎಸೆತ, ತಲೆ ಮೇಲೆ ತಟ್ಟೆ ಇಟ್ಟು ಓಡುವುದು, ಬಾಟಲಿಗೆ ನೀರು ತುಂಬುವ ಸ್ಫರ್ದೇ, ತುಳು ಎದುರುಕತೆ, ಮಕ್ಕಳಿಗಾಗಿ ಹಾಳೆಯಲ್ಲಿ ಕೂತು ಎಳೆಯುವ ಸ್ಫರ್ದೇ, ಹಿಂದೆ ಹಿಂದೆ ಓಡುವ ಸ್ಫರ್ದೇ,ಕೋರಿದ ಗೂಟ, ಮಡಕೆ ಒಡೆಯುವುದು, ಕಂಬಳ ಓಟ, ಮೂರು ಕಾಲಿನ ಓಟ, ತುಳು ಎದುರು ಕತೆ, ಬೆಳಗ್ಗಿನಿಂದ ರಾತ್ರಿಯವರೆಗೆ ನಡೆದ ಕಾರ್ಯಕ್ರಮದಲ್ಲಿ ಒಟ್ಟಾರೆಯಾಗಿ ತುಳು ಭಾಷೆ, ಸಂಸ್ಕೃತಿ ಹಳ್ಳಿಯ ಸೌಂಧರ್ಯ ವೈಭವೀಕರಿಸುತ್ತಿತ್ತು.

Related posts

Leave a Reply