Header Ads
Breaking News

ಲೋಕಸಭಾ ಚುನಾವಣೆಗೆ ಕಾರ್ಕಳದಲ್ಲಿ ಬಿಜೆಪಿಯಿಂದ ಸಿದ್ಧತೆ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಕಳ ಬಿಜೆಪಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ ಈಗಾಗಲೆ ಮುಕ್ತಾಯವಾಗಿದೆ. 2-ಹಂತದ ಗ್ರಾಮ ಪಂಚಾಯತ್ ಸಭೆ ಮುಕ್ತಾಯವಾಗಿದೆ. ಪಂಚಾಯಿತಿ ಮಟ್ಟದ ಪೂರ್ವ ತಯಾರಿ ನಿನ್ನೆಗೆ ಮುಕ್ತಾಯವಾಗಿದ್ದು ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬ ಪೂರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಕಾರ್ಕಳದ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.

ಚುನಾವಣೆಯ ವೇಗವನ್ನು ವೃದ್ಧಿಸಬೇಕು ಎನ್ನುವ ನಿಟ್ಟಿನಲ್ಲಿ ಇದೇ ತಿಂಗಳು 31 ಬೆಳಿಗ್ಗೆ 10 ಗಂಟೆಗೆ ಮಂಜುನಾಥ ಸಭಾಭವನದಲ್ಲಿ ವಿಜಯ ಸಂಕಲ್ಪ ಎಂಬ ಸಭೆಯನ್ನು ಆಯೋಜನೆ ಮಾಡಿದ್ದೇವೆ. ತಾಲೂಕಿನ 220 ಬೂತ್‌ಗಳಿಂದ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಕಾರ್ಕಳ ತಾಲೂಕಿನಲ್ಲಿ ಬಿಜೆಪಿ ಅಲೆ ಎದ್ದು ಕಾಣುತ್ತದೆ. ಅದಲ್ಲದೆ ಕಾಂಗ್ರೆಸ್ಸಿನ ವಿರೋಧಿ ಭಾವನೆ ಎದ್ದು ಕಾಣುತ್ತದೆ ಏಪ್ರಿಲ್ ಎರಡನೇ ತಾರೀಕು ಸಂಜೆ ೫ ಗಂಟೆಗೆ ಕಾರ್ಕಳ ಶಿವತಿಕೆರೆ ಬಳಿ ಇರುವ ಸಭಾಂಗಣದಲ್ಲಿ ಪ್ರಬುದ್ಧರ ಗೋಷ್ಠಿ ನಡೆಯಲಿದ್ದು ತಾಲೂಕಿನ ಐನೂರಕ್ಕೂ ಹೆಚ್ಚು ಗಣ್ಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದು. ಅದಲ್ಲದೆ ಬೆಂಗಳೂರಿನ ಮಾಜಿ ಮಂತ್ರಿ ಹಾಗೂ ಶಾಸಕರಾದ ಸುರೇಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Related posts

Leave a Reply

Your email address will not be published. Required fields are marked *