Header Ads
Header Ads
Breaking News

ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸಜ್ಜು : ಈಶ್ವರ ಖಂಡ್ರೆ ಹೇಳಿಕೆ

 ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ. ಕೇಂದ್ರದ ಬಿಜೆಪಿ ಸರ್ಕಾರವನ್ನು ಕಿತ್ತೋಗೆಯಲು ಕಾಂಗ್ರೆಸ್ ಪಣತೊಟ್ಟಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಈ ಕುರಿತು ಮಂಗಳೂರಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲಾಗುವುದು. ಬಿಜೆಪಿಯ ವೈಫಲ್ಯವನ್ನು ಜನತೆಗೆ ತಿಳಿಯಪಡಿಸುವ ಕಾರ್ಯ ರಾಜ್ಯಾದ್ಯಂತ ನಡೆಯುತ್ತಿದೆ. ಅದರ ಜೊತೆಯಲ್ಲಿಯೇ ಜಿಲ್ಲಾಮಟ್ಟದ ಸಮಾವೇಶವನ್ನು ಈಗಾಗಲೇ ನಡೆಸಲಾಗಿದೆ ಎಂದು ಅವರು ಹೇಳಿದರು. ಮೈತ್ರಿ ಸರ್ಕಾರ ಅಂದ್ಮೇಲೆ ಮೈತ್ರಿ ಧರ್ಮ ಪಾಲಿಸುವುದು ಮುಖ್ಯವಾಗುತ್ತೆ, ಒಂದುವಾರದೊಳಗೆ ಮೈತ್ರಿ ವಿಚಾರದ ಬಗ್ಗೆ ನಿರ್ಣಯ ಆಗಲಿದೆ. ಯಾವೆಲ್ಲ ಸೀಟುಗಳನ್ನು ಬಿಟ್ಟುಕೊಡಬೇಕೆಂದು ನಿರ್ಣಯಿಸಲಿದ್ದೇವೆ ಎಂದು ಅವರು ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಜನಾರ್ದನ ಪೂಜಾರಿ ಅವರು ಸ್ಪರ್ಧೆ ಮಾಡ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಈಶ್ವರ ಖಂಡ್ರೆ, ಪೂಜಾರಿ ಬಗ್ಗೆ ಅಪಾರ ಗೌರವವಿದೆ. ಕೇಂದ್ರದಲ್ಲಿ ಸಚಿವರಾಗಿರುವಾಗ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಪೂಜಾರಿಯವರು ಸ್ಪರ್ಧೆ ಮಾಡುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರವಾಗಿದೆ ಎಂದು ಅವರು ಹೇಳಿದರು.

Related posts

Leave a Reply

Your email address will not be published. Required fields are marked *