Header Ads
Header Ads
Breaking News

ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತವಾಗಿ ನಡೆಸಲು ತೀರ್ಮಾನ:ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಹೇಳಿಕೆ

ಪುತ್ತೂರು: ಲೋಕಸಭಾ ಚುನಾವಣೆಯನ್ನು ಶಾಂತಿ ಮತ್ತು ನ್ಯಾಯಸಮ್ಮತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸ್ ಇಲಾಖೆ ತನ್ನ ಕರ್ತವ್ಯ ನಿರ್ವಹಿಸಲು ಸನ್ನದ್ಧವಾಗಿದೆ. ಯಾವುದೇ ಬಗೆಯ ಅಕ್ರಮಗಳನ್ನು ಮಟ್ಟಹಾಕಿ, ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಹೇಳಿದರು.
ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉನ್ನತ ಪೊಲೀಸ್ ಅಧಿಕಾರಿಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು, ಎಎಸ್‌ಐ, ಹೆಡ್‌ಕಾನ್‌ಸ್ಟೇಬಲ್‌ಗಳು ಸೇರಿದಂತೆ ಚುನಾವಣಾ ಕರ್ತವ್ಯಕ್ಕೆಂದು ನೇಮಿಸಲಾದ ನಾನಾ ತಂಡಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
ಪೊಲೀಸ್ ಇಲಾಖೆಯ ಮೇಲೆ ಚುನಾವಣೆ ಸಂದರ್ಭ ಮಹತ್ವದ ಹೊಣೆಗಾರಿಕೆ ಇದೆ. ಅದನ್ನು ನಾವು ವ್ಯವಸ್ಥಿತವಾಗಿ ನಿಭಾಯಿಸಬೇಕಾಗಿದೆ. ಚುನಾವಣಾ ಆಯೋಗ ಈ ಸಂಬಂಧ ಮೂರು ಬಗೆಯ ಸುತ್ತೋಲೆಗಳನ್ನು ಕಳುಹಿಸಿದೆ. ಇದರಲ್ಲಿ ನಾವು ನಿರ್ವಹಿಸಬೇಕಾದ ಹೊಣೆಗಾರಿಕೆಯ ವಿವರವಿದೆ. ಇದನ್ನು ಎಲ್ಲ ಇನ್‌ಸ್ಪೆಕ್ಟರ್‌ಗಳನ್ನು ಸಮಗ್ರವಾಗಿ ಓದಿಕೊಂಡು ಮನನ ಮಾಡಿಕೊಳ್ಳಬೇಕು ಮತ್ತು ತಮ್ಮ ಕೆಳಗಿನ ಅಧಿಕಾರಿಗಳಿಗೆ ಅದನ್ನು ವಿವರಿಸಬೇಕು ಎಂದು ಸೂಚಿಸಿದರು.
ಚುನಾವಣೆ ಘೋಷಣೆಯಾಗಿರುವ ಕಾರಣ ಪ್ರತಿಯೊಬ್ಬ ನಾಗರಿಕರೂ ತಮ್ಮಲ್ಲಿ 50 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ನಗದು ಇಟ್ಟುಕೊಂಡು ಹೋಗುವ ಬಗ್ಗೆ ಎಚ್ಚರಿಕೆ ವಹಿಸಬೇಕು. ಆ ಹಣದ ಬಗ್ಗೆ ಸೂಕ್ತ ದಾಖಲೆ ಇಟ್ಟುಕೊಳ್ಳಬೇಕು. ದಾಖಲೆ ಇಲ್ಲದಿದ್ದರೆ ವಶಪಡಿಸಿಕೊಳ್ಳಲಾಗುತ್ತದೆ. ಅದೇ ರೀತಿ ಚುನಾವಣಾ ಸಾಮಗ್ರಿಗಳನ್ನು ದಾಖಲೆ ಇಲ್ಲದೆ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.ಪುತ್ತೂರು ಸಹಾಯಕ ಆಯುಕ್ತರಾದ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ಚುನಾವಣಾ ಕಾರ್ಯವನ್ನು ಸುಲಲಿತವಾಗಿ ನಡೆಸಲು ನಮ್ಮ ಇಲಾಖೆ, ಪೊಲೀಸ್ ಇಲಾಖೆ ಎಲ್ಲರೂ ಸೇರಿ ಕರ್ತವ್ಯ ನಿರ್ವಹಿಸೋಣ. ಸಮಸ್ಯೆ ಬಂದಾಗ ಅದನ್ನು ಸರಿಯಾಗಿ ನಿರ್ವಹಿಸೋಣ. ಆದರೆ ನಮ್ಮ ಕಡೆಯಿಂದ ಸಮಸ್ಯೆ ಸೃಷ್ಟಿಯಾಗದಿರಲಿ ಎಂದರು. ಲವೊಮ್ಮೆ ನಾವು ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಸೋತರೆ ಅಥವಾ ನಮ್ಮ ಕಡೆಯಿಂದಲೇ ಪ್ರಚೋದನೆ ಉಂಟಾದರೆ ಸಮಸ್ಯೆ ಉಂಟಾಗುತ್ತದೆ. ಫ್ಲೈಯಿಂಗ್ ಸ್ಕ್ವಾಡ್‌ನವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಎಫ್‌ಐಆರ್ ಮಾಡುವ ಸಂದರ್ಭ ಬಂದರೆ ಪೊಲೀಸ್ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮ್ಟೆ ಮಾತನಾಡಿದರು. ಂಟ್ವಾಳ ಎಎಸ್‌ಪಿ ಸೈದುಲ್ಲಾ ಅದಾವತ್, ಡಿಸಿಆರ್‌ಬಿಯ ಡಿವೈಎಸ್‌ಪಿ ನಟರಾಜ್, ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಪ್ರದೀಪ್ ಗುಂಟಿ, ಪ್ರೊಬೆಷನರಿ ಡಿವೈಎಸ್‌ಪಿ ಶಿವಾನಂದ ಮದರಗಂಡಿ, ಪುತ್ತೂರು ಸಹಾಯಕ ಆಯುಕ್ತರಾದ ಕೃಷ್ಣಮೂರ್ತಿ ಎಚ್.ಕೆ., ತಹಸೀಲ್ದಾರ್ ಡಾ.ಪ್ರದೀಪ್ ವೇದಿಕೆಯಲ್ಲಿದ್ದರು.

Related posts

Leave a Reply

Your email address will not be published. Required fields are marked *