Header Ads
Header Ads
Breaking News

ಲೋಕಸಭಾ ಚುನಾವಣೆಯಲ್ಲಿ 50 ಸಾವಿರ ಮತಗಳ ಗೆಲುವು ಸಾಧಿಸಬೇಕು : ಸಂಜೀವ ಮಠಂದೂರು ಹೇಳಿಕೆ

ಪುತ್ತೂರು: ಸಾಮಾನ್ಯ ಪ್ರದೇಶದಿಂದ ನಮ್ಮದೇಶದ ರಾಜಧಾನಿ ದೆಹಲಿಯವರೆಗೆ ತಲುಪಿದ ಪಾರ್ಟಿಯೇ, ಭಾರತೀಯ ಜನತಾ ಪಾರ್ಟಿ ಹಾಗೂ ಉತ್ತಮ ಸದಸ್ಯತ್ವವನ್ನು ಹೊಂದಿದ ಪಾರ್ಟಿ ನಮ್ಮದು. ಆದ್ದರಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು 50ಸಾವಿರ ಮತಗಳ ಗೆಲುವು ದಾಖಲಿಸಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಶನಿವಾರ ಪುತ್ತೂರು ಟೌನ್ ಬ್ಯಾಂಕ್ ಸಭಾಂಗಣದಲ್ಲಿ2019ರ ಲೋಕಸಭಾ ಚುನಾವಣಾ ಸಿದ್ಧತಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಭಾರತೀಯ ಜನತಾ ಪಾರ್ಟಿಯು ತನ್ನದೇ ಆದ ಇತಿಹಾಸವನ್ನು ರೂಪಿಸಿದೆ. ಅಟಲ್ ಬಿಹಾರಿ ವಾಜಪೇಯಿ, ಅವರಂತಹ ಮಹಾನ್ ವ್ಯಕ್ತಿ ಹಾಗೂ ನಮ್ಮ ಪಕ್ಷವನ್ನು ಎತ್ತರಕ್ಕೆ ತಲುಪಿಸಿದವರು. ಈಗ ಅವರ ಹಾದಿಯಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಾಗುತ್ತಿದ್ದಾರೆ. ಹಾಗಾಗಿ ಅವರನ್ನು ನಾವು ಬೆಂಬಲಿಸಬೇಕಾಗಿದೆ ಎಂದರು.

ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಬಜೆಟ್‌ನ್ನು ಐಸ್ ಕ್ಯಾಂಡಿ ರೀತಿಯಲ್ಲಿ ಮಾಡಿದ್ದು, ಕರಾವಳಿ ಭಾಗಕ್ಕೆ ಎಳ್ಳುಂಡೆಯಂತಹ ಬಜೆಟ್‌ಗಳನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯಕ್ಕೆ ಬಜೆಟ್ ಮಾಡುವ ಬದಲು ಕೆಲವು ಪ್ರದೇಶಕ್ಕೆ ಸೀಮಿತವಾದ ಬಜೆಟ್ ಮಂಡಿಸಿದ್ದಾರೆ ಎಂದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರತಾಪ ಸಿಂಹ, ಭಾರತೀಯ ಜನತಾ ಪಾರ್ಟಿಯ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟಿ, ಪುತ್ತೂರು ನಗರ ಮಂಡಲ ಅಧ್ಯಕ್ಷ ಕೆ. ಜೀವಂಧರ ಜೈನ್, ಚುನಾವಣಾ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಉಪಸ್ಥಿತರಿದ್ದರು.

Related posts

Leave a Reply