Header Ads
Header Ads
Breaking News

ಲೋಕಸಭಾ ಚುನಾವಣೆ ಹಿನ್ನೆಲೆ:ಎಡರಂಗ ಅಭ್ಯರ್ಥಿಯಿಂದ ಪ್ರಚಾರಕ್ಕೆ ಚಾಲನೆ

ಮಂಜೇಶ್ವರ: ಕಾಸರಗೋಡು ಜಿಲ್ಲೆಯ ಜನತೆಗೆ ಮೊದಲೇ ಚಿರಪರಿಚತನಾಗಿರುವ ಪ್ರತ್ಯೇಕವಾಗಿಯೂ ಮಂಜೇಶ್ವರ ವಿವಿಧೆಡೆಗಳ ಮೂಲೆ ಮೂಲೆಗಳಲ್ಲೂ ಮೊದಲೇ ಸಂಪರ್ಕವನ್ನಿಟ್ಟು ಕೊಂಡಿದ್ದ ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡಿನಿಂದ ಸ್ಪರ್ಧಿಸುವ ಎಡರಂಗ ಅಭ್ಯರ್ಥಿ ಕೆ.ಪಿ ಸತೀಶ್ಚಂದ್ರ ರವರು ಮಂಜೇಶ್ವರ ಮಂಡಲದಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು.

ಪೆರ್ಲಕ್ಕೆ ತಲುಪಿದ ಅವರಿಗೆ ಎಡರಂಗದ ನೇತಾರರು ಹಾಗೂ ಕಾರ್ಯಕರ್ತರು ಭವ್ಯವಾದ ಸ್ವಾಗತವನ್ನು ನೀಡಿ ಸ್ವೀಕರಿಸಿದರು. ಬಳಿಕ ಸತೀಶ್ಚಂದ್ರನ್ ಅಲ್ಲಿನ ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧೆಡೆ ಭೇಟಿ ನೀಡಿ ಮತ ಯಾಚಿಸಿದರು. ಬಳಿಕ ಬಾಡೂರು, ಸೀತಾಂಗೋಳಿ, ಕುಂಜತ್ತೂರು, ಹೊಸಂಗಡಿ, ಉಪ್ಪಳ ಸೇರಿದಂತೆ ವಿವಿಧೆಡೆ ಪರ್ಯಟನೆ ನಡೆಸಿ ಕುಂಬಳೆಯಲ್ಲಿ ಸಮಾಪ್ತಿಗೊಂಡಿತು.

Related posts

Leave a Reply

Your email address will not be published. Required fields are marked *