Header Ads
Breaking News

ಲೋಕಸಭಾ ಚುನಾವಣೆ ಹಿನ್ನೆಲೆ:  ಫರಂಗಿಪೇಟೆಯಲ್ಲಿ ಬಹಿರಂಗ ಸಭೆಗೆ ಚಾಲನೆ

ಬಂಟ್ವಾಳ: ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಕಾಂಗ್ರೆಸ್ ಬಹಿರಂಗ ಸಭೆಗೆ ಶನಿವಾರ ರಾತ್ರಿ ಫರಂಗಿಪೇಟೆಯಲ್ಲಿ ಚಾಲನೆ ನೀಡಲಾಯಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಯೋಧರ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅದಲ್ಲದೆ, ದೇಶದ ಭದ್ರತೆ ಮಾಡಿದ ಕಾರ್ಯವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ ಹಾಗೆ ಬಿಂಬಿಸಿಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಇಂತಹ ಸರ್ಜಿಕಲ್ ಸ್ಟೈಕ್ ಮಾಡಿದ್ದು, ಯೋಧರ ಹೆಸರಿನಲ್ಲಿ ರಾಜಕೀಯ ಮಾಡದೇ ಕಾಂಗ್ರೆಸ್ ಯೋಧರಿಗೇ ಬಿಟ್ಟಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಮಿಥನ್ ರೈ ಮಾತನಾಡಿ, ಬಿಜೆಪಿಯ ಭದ್ರ ಕೋಟೆಯನ್ನು ಪರಿವರ್ತನೆ ಮಾಡುವ ಸಂಕಲ್ಪ ಕಾರ್ಯಕರ್ತರು ಮಾಡಬೇಕಿದೆ. ದ.ಕ.ದಲ್ಲಿ ಬದಲಾವಣೆಯನ್ನು ಕೇವಲ ಕಾಂಗ್ರೆಸ್ ಬಿಜೆಪಿ ಪಕ್ಷದ ನಾಯಕರು ಬದಲಾವಣೆ ಅಗತ್ಯವಿದೆ ಎಂದು ಕಳೆದ ೧೦ ವರ್ಷಗಳಲ್ಲಿ ದ.ಕ. ಅಭಿವೃದ್ಧಿಗೆ ಧಕ್ಕೆ ಉಂಟಾಗುತ್ತಿದೆ. ಜಿಲ್ಲೆಗೆ ಬೆಂಕಿ ಹಚ್ಚುವ ಕೆಲಸವನ್ನು ಸಂಸದರೇ ಮಾಡುತ್ತಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ ವೈಭವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡುತ್ತೇನೆ. ಜಿಲ್ಲೆಯಲ್ಲೇ ಉದ್ಯೋಗ ಸೃಷ್ಟಿ ಮಾಡುವ ಕೆಲಸವಾಗಬೇಕಾಗಿದೆ. ಇನ್ನಿರುವ ೨೦ದಿನಗಳ ಕಾಲ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಾತನಾಡಿ ನಮಗೆ ಎಡಪಂಥೀಯ ವಾದವೂ ಬೇಡ ಬಲ ಪಂಥೀಯ ವಾದವೂ ಬೇಡ ನಾವು ನೇರ ಪಂಥೀಯ ವಾದದೊಂದಿಗೆ ಮುನ್ನಡೆ ಯೋಣ ಎಂದರು. ವೇದಿಕೆಯಲ್ಲಿ ಪಕ್ಷದ ಪ್ರಮುಖರಾದ ಅಬ್ಬಾಸ್ ಅಲಿ, ಮಮತಾ ಗಟ್ಟಿ, ಇಕ್ಬಾಲ್ ಸುಜೀರ್, ಶಾಹುಲ್ ಹಮೀದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮರ್ ಫಾರೂಕ್ ರಮ್ಲಾನ್ ಮಾರಿಪಳ್ಳ, ಹಾಶಿರ್ ಪೆರಿಮಾರ್ ಉಪಸ್ಥಿತರಿದ್ದರು.

ವರದಿ: ಸಂದೀಪ್ ಬಂಟ್ವಾಳ

Related posts

Leave a Reply

Your email address will not be published. Required fields are marked *