Header Ads
Header Ads
Breaking News

ಲೋಕಸಭಾ ಸೀಟು ಹಂಚಿಕೆ ವಿಚಾರ,ಪಕ್ಷದ ವರಿಷ್ಠರು ನೀಡುವ ನಿರ್ಧಾರಕ್ಕೆ ಬದ್ಧ. ಐವನ್ ಡಿಸೋಜ ಹೇಳಿಕೆ

ನಾನು ಯಾವುದೇ ಅರ್ಜಿ ಹಾಕಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೇಟು ಕೇಳಿಲ್ಲ, ಬೆಂಗಳೂರಿನಲ್ಲಿ ನಡೆದ ಸಭೆಯಲ್ಲೇ ನನ್ನ ಹೆಸರು ಶಿಫಾರಾಸು ಮಾಡಿದ್ದಾರೆ, ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ. ಇಲ್ಲ ಪಕ್ಷ ಯಾರಿಗೆ ಅವಕಾಶ ನೀಡುತ್ತೆ ಅವರ ಪರವಾಗಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.ಅವರು ಮುದರಂಗಡಿ ವಿದ್ಯಾನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣಗೋಡೆ, ಮೈದಾನ ಸಮತಟ್ಟು ಸಹಿತ 20 ಲಕ್ಷ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಮಾತನಾಡಿದರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಟಿಕೇಟಿಗೂ ಪ್ರಮೋದ್ ಮಧ್ವರಾಜ್-ಆರತಿ ಕೃಷ್ಣ-ವಿನಯ ಕುಮಾರ್ ಸೊರಕೆಯವರ ಹೆಸರೂ ಚಾಲ್ತಿಯಲ್ಲಿದೆ, ನಾವು ಆಕಾಂಕ್ಷಿಗಳಷ್ಟೇ ಅಂತಿಮವಾಗಿ ಪಕ್ಷ ಯಾರಿಗೆ ಟಿಕೇಟು ನೀಡುತ್ತೆ ಅವರ ಪರವಾಗಿ ಅವರ ಗೆಲುವಿಗಾಗಿ ಕೆಲಸ ಮಾಡಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಅತೀ ಹೆಚ್ಚು ಸೀಟುಗಳಿಸಿ ಕೊಡುವ ಮೂಲಕ ನಮ್ಮ ನೆಚ್ಚಿನ ನಾಯಕ ರಾಹುಲ್ ಗಾಂಧಿಯವನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ ಎಂದರು

ಈ ಸಂದರ್ಭ ತಾ.ಪಂ. ಸದಸ್ಯ ಮೈಕಲ್ ರಮೇಶ್ ಡಿಸೋಜ, ಮೆಲ್ವಿನ್ ಡಿಸೋಜ ಶಿರ್ವ ಗ್ರಾ.ಪಂ. ಸದಸ್ಯ , ಫಾರೂಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗ ಸದಸ್ಯ, ರಾಜೇಶ್ ಕುಲಾಲ್ ಕುತ್ಯಾರು ಗ್ರಾ.ಪಂ. ಸದಸ್ಯ, ದಿವಾಕರ ಶೆಟ್ಟಿ ಕುತ್ಯಾರು ಸ್ಥಾನೀಯ ಸಮಿತಿ ಅಧ್ಯಕ್ಷ ಮೊದಲಾದವರಿದ್ದರು.

Related posts

Leave a Reply

Your email address will not be published. Required fields are marked *