Header Ads
Breaking News

ಲೋಕಸಭೆ ಚುನಾವಣೆಗೆ ನಾವು ಯಾರೂ ಮತ ಚಲಾಯಿಸೋದಿಲ್ಲ : ಲಾರಿ ಮಾಲಕರ ಗೌರವಾಧ್ಯಕ್ಷ ಉದಯ್ ಹೆಗ್ಡೆ ಆಕ್ರೋಶ

ಉಡುಪಿ ಜಿಲ್ಲೆಯಲ್ಲಿ ಉದ್ಭವಿಸಿರುವ ಮರಳಿನ ಸಮಸ್ಯೆ, ಕೃಷರ್‌ಗಳ ಸಮಸ್ಯೆ, ಕೆಂಪು ಕಲ್ಲು ಸಮಸ್ಯೆಯನ್ನು ಸರಿಪಡಿಸಿ ಸಾಮಾನ್ಯ ಜನರಿಗೆ ನ್ಯಾಯವನ್ನ ಒದಗಿಸಿಕೊಡುವಲ್ಲಿ ವಿಫಲವಾಗಿರುವ ಮತ್ತು ಸಾಮಾನ್ಯ ಜನರ ಜೀವನ ಮಟ್ಟವು ಕಠಿಣ ಮತ್ತು ನಿಕೃಷ್ಟ ಸ್ಥಿತಿಗೆ ಬರುವಲ್ಲಿ ಕಾರಣೀಕರ್ತವಾದ ಸರ್ಕಾರ ಹಾಗೂ ಇನ್ನಿತರ ಇಲಾಖಾಧಿಕಾರಿಗಳ ವಿರುದ್ಧ ಎಲ್ಲಾ ಕಾರ್ಮಿಕರು ಹಾಗೂ ಜನಸಾಮಾನ್ಯರು ಸೇರಿ ಪ್ರತಿಭಟನೆಯನ್ನ ನಡೆಸಲಿದ್ದೇವೆ ಎಂದು ಲಾರಿ ಮಾಲಕರ ಗೌರವಾಧ್ಯಕ್ಷರಾದ ಉದಯ್ ಹೆಗ್ಡೆ ತಿಳಿಸಿದ್ರು.

ಅವರು ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಯಾವುದೇ ಒತ್ತಡ ಮತ್ತು ಆಮಿಷಕ್ಕೆ ಒಳಗಾಗದೇ ಮುಂದೆ ನಡೆಯುವಂತಹ ಲೋಕಸಭೆ ಚುನಾವಣೆಯಯಲ್ಲಿ ನಾವು ಯಾರೂ ಮತ ಚಲಾಯಿಸದೇ ನಮಗಾಗಿರುವ ಅನ್ಯಾಯವನ್ನ ಮತ್ತು ನೋವನ್ನ ತೋರ್ಪಡಿಸಕೊಳ್ಳುವ ಬಗ್ಗೆ ಚುನಾವಣಾ ಬಹಿಷ್ಕಾರವನ್ನ ಮಾಡುವ ತೀರ್ಮಾನಕ್ಕೆ ಬಂದಿರುತ್ತೇವೆ. ಈ ಪ್ರಯುಕ್ತ ಇದೇ ಬರುವ ಎಪ್ರಿಲ್ ೧ನೇ ತಾರೀಕಿನಿಂದ ಎಲ್ಲಾ ಕಾರ್ಮಿಕರು ಸೇರಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಗಮನಕ್ಕೆ ತರಲು ಪ್ರಯತ್ನಿಸ್ತೇವೆ ಎಂದು ಹೇಳಿದ್ರು..
ಈ ಸಂದರ್ಭ ಉದಯ್ ಕುಮಾರ್ ಹೆರ್ಮುಂಡೆ, ದಿವಾಕರ್ ಶೆಟ್ಟಿ, ರಾಜಶೇಖರ್, ಪ್ರಶಾಂತ್, ಹರೀಶ್ ಅಮೀನ್, ರವಿರಾಜ್ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *