Header Ads
Header Ads
Header Ads
Header Ads
Header Ads
Header Ads
Breaking News

ಲೋಕಾಯುಕ್ತದಿಂದ ಸುಳ್ಯದಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ

ನಿಯಮದ ಚೌಕಟ್ಟಿನ ಪ್ರಕಾರವಾಗಿ ಕೆಲಸ ಮಾಡದಿರುವುದು ಮತ್ತು ನಿಯಮದ ಚೌಕಟ್ಟಿನ ಹೊರತಾದ ಕೆಲಸಗಳನ್ನು ಮಾಡುವುದು ಎರಡೂ ಸರಿಯಲ್ಲ. ಇಂತಹ ಅಪರಾಧಗಳನ್ನು ಅಧಿಕಾರಿಗಳನ್ನು ಮಾಡಬಾರದು ಎಂದು ಲೋಕಾಯುಕ್ತ ಡಿವೈಎಸ್‍ಪಿ ವಿಜಯಪ್ರಸಾದ್ ಹೇಳಿದ್ದಾರೆ.

ಸುಳ್ಯದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರದ ಬಳಿಕ ಅವರು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕರು ತಮ್ಮ ಅಗತ್ಯ ಕಾರಣಗಳಿಗಾಗಿ ಕಚೇರಿಗಳಿಗೆ ಬರುತ್ತಾರೆ. ಅಂತವರನ್ನು ಅಲೆದಾಡಿಸುವುದಾಗಲೀ, ಸತಾಯಿಸುವುದಾಗಲೀ ಮಾಡಬಾರದು ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅನಾವಶ್ಯಕವಾಗಿ ಕಡತಗಳನ್ನು ತಿರಸ್ಕರಿಸುವ ಕ್ರಮ ಸರಿಯಲ್ಲ . ಅನೇಕ ಕಚೇರಿಗಳಲ್ಲಿ ಕಡತಗಳ ನಿರ್ವಹಣೆಯೇ ಸಮಸ್ಯೆ. ಕಡತಗಳು ಲಭ್ಯವಿಲ್ಲ ಎಂಬ ಒಂದು ಮಾತಿನ ಷರಾ ಬರೆಯುತ್ತಾರೆ. ಇಂತಹ ಕಾರಣಗಳನ್ನು ಹೇಳಿದರೆ ಇದಕ್ಕೆ ಇಲಾಖಾಧಿಕಾರಿಗಳೇ ಹೊಣೆಯಾಗುತ್ತಾರೆ. ಎಂದವರು ಹೇಳಿದರು.
ಬಳಿಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಯಿತಲ್ಲದೆ ದೂರಿನ ಆಧಾರದಲ್ಲಿ 3 ಪ್ರಕರಣಗಳನ್ನು ದಾಖಲಿಸಲು ಇಲಾಖೆ ನಿರ್ಧರಿಸಿತು.

ಸುಳ್ಯ ನಗರ ಪಂಚಾಯತ್ ಆವರಣದಲ್ಲಿಯೇ ತ್ಯಾಜ್ಯ ವಿಲೇವಾರಿ ಮಾಡಿ ಸಮಸ್ಯೆ ಉಂಟಾಗಿದೆ ಎಂದು ಶಾರೀಕ್ ಹೇಳಿದರು. ತ್ಯಾಜ್ಯ ವಿಲೇವಾರಿಗೆ ಸಮರ್ಪಕ ಜಾಗ ಇಲ್ಲದ ಕಾರಣ ಇಂತಹ ಸಮಸ್ಯೆ ಎದುರಾಗುತ್ತಿದೆ. ಆದರೂ ಈಗ ಸಮಸ್ಯೆ ಆಗದಂತೆ ನಿಗಾ ವಹಿಸಲಾಗಿದೆ ಎಂದು ಮುಖ್ಯಾಧಿಕಾರಿ ಮತ್ತಡಿ ಹೇಳಿದರು. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದೇವೆ. ಕಸವನ್ನು ಬರ್ನ್ ಮಾಡುವ ವ್ಯವಸ್ಥೆಗೆ ಒಪ್ಪಿಗೆ ದೊರೆಯುತ್ತಿಲ್ಲ. 30000ದಷ್ಟು ಜನಸಂಖ್ಯೆ ಇರುವ ನಗರದಲ್ಲಿ ಸಾರ್ವಜನಿಕ ಉದ್ಧೇಶಕ್ಕೆ 2 ಎಕ್ರೆ ಕೂಡಾ ಮೀಸಲಿರಿಸದೇ ಇರುವುದು ಇಂತಹ ಸಮಸ್ಯೆಗಳಿಗೆ ಕಾರಣ ಎಂದು ತಹಶೀಲ್ದಾರ್ ಕುಂಞÂ ಅಹ್ಮದ್ ಹೇಳಿದರು.

ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಕುರುಂಜಿ ವೆಂಕಟ್ರಮಣ ಗೌಡ ಪುತ್ಥಳಿ ಕುರಿತಂತೆ ಶಾರೀಕ್ ಅವರು ನೀಡಿದ ದೂರಿನ ಬಗ್ಗೆಯೂ ಪ್ರಸ್ತಾಪವಾಯಿತು. ಅನುಮತಿ ಪಡೆಯದಿದ್ದರೆ ಮುಂದಿನ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಏನು ಕ್ರಮ ಕೈಗೊಂಡಿದ್ದೀರಿ ಎಂದು ಡಿವೈಎಸ್‍ಪಿ ಪ್ರಶ್ನಿಸಿದರು. ಇದಕ್ಕೆ ನ.ಪಂ.ನಿಂದ ಪರ್ಮಿಷನ್ ಪಡೆಯಲಾಗಿಲ್ಲ. ನಾವು ಎನ್‍ಒಸಿಯನ್ನಷ್ಟೇ ನೀಡಿದ್ದೇವೆ. ಇದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಅವರ ಪರ್ಮಿಷನ್ ಪಡೆಯುವಂತೆ ಸೂಚಿಸಿದ್ದೇವೆ ಎಂದು ನ.ಪಂ. ಅಧಿಕಾರಿಗಳು ಹೇಳಿದರು. ಅಲ್ಲಿಗೆ ನೀರಿನ ಕನೆಕ್ಷನ್ ಮತ್ತು ವಿದ್ಯುತ್ ಕನೆಕ್ಷನ್ ಪಡೆಯಲಾಗಿದೆ ಎಂಬ ಆರೋಪವಿದೆ ಎಂದು ಹೇಳಿದ ಡಿವೈಎಸ್‍ಪಿಯವರು ಈ ಪ್ರಕರಣವನ್ನೂ ದಾಖಲಿಸಲು ಸೂಚಿಸಿದರು.

ಈ ಸಂದರ್ಭ ತಹಶೀಲ್ದಾರ್ ಕುಂಞ ಅಹ್ಮದ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ಮಹಾದೇವ್, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ, ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿದ್ದರು.

Related posts

Leave a Reply

Your email address will not be published. Required fields are marked *