Header Ads
Header Ads
Breaking News

ಲೋರೆಟ್ಟೋ ಪದವು ಮದರಸ ವಠಾರದಲ್ಲಿ ಬೃಹತ್ ರಕ್ತದಾನ ಶಿಬಿರ

ಬಂಟ್ವಾಳ : ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಫ್ರೆಂಡ್ಸ್ ಟಿಪ್ಪುನಗರ ವಾಟ್ಸಪ್ ಗ್ರೂಪ್ ಜಂಟಿ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಬಾಗಿತ್ವದಲ್ಲಿ ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮವು ಲೋರೆಟ್ಟೋ ಪದವು ಟಿಪ್ಪುನಗರ ಇರ್ಷಾದುಸ್ಸಿಬಿಯಾನ್ ಅರೇಬಿಕ್ ಮದರಸ ವಠಾರದಲ್ಲಿ ನಡೆಯಿತು.ಈ ರಕ್ತದಾನ ಶಿಬಿರದಲ್ಲಿ ಒಟ್ಟು 65 ಯುನಿಟ್ ರಕ್ತವನ್ನು ದಾನಿಗಳ ನೆರವಿನಿಂದ ಸಂಗ್ರಹಿಸಲಾಯಿತು. ಶಿಬಿರವನ್ನು ಟಿಪ್ಪು ನಗರ ಮಸೀದಿಯ ಮಾಜಿ ಖತೀಬರಾದ ಕೆ.ಎಂ ಅಬ್ದುಲ್ಲ ಮೌಲವಿ ದುವಾಶಿರ್ವಚನ ಮೂಲಕ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೆ.ಎಂ.ಎಚ್ ಫಾಝಿಲ್ ಹನೀಫ್.ಯಾಕೂಬ್ ಎನ್.ಇ. ಮುಹಮ್ಮದ್ ಹನೀಫ್.ನೌಶಾದ್ ಕುಕ್ಕಾಜೆ.ರಿಯಾಝ್. ಟಿ.ಎಂ ರಿಯಾಝ್.ಬಿ.ಎಚ್ ಯಾಕೂಬ್, ಅಶ್ರಫ್ ಅರಬಿ ಕಲ್ಲಡ್ಕ, ಹಾಗು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯನಿರ್ವಾಹಕರು ಉಪಸ್ಥಿತರಿದ್ದರು.

Related posts

Leave a Reply