Header Ads
Header Ads
Header Ads
Breaking News

ಲೋರೆಟ್ಟೋ ಹಿಲ್ಸ್ ನೂತನ ಕ್ಲಬ್ ಉದ್ಘಾಟನೆ ರೋಟರಿ ಕ್ಲಬ್‌ನ ಸನದ್ದು ಪ್ರದಾನ ಸಮಾರಂಭ ಬಂಟ್ವಾಳದ ಲೋರೆಟ್ಟೋ ಚರ್ಚ್ ಹಾಲ್‌ನಲ್ಲಿ ಕಾರ್ಯಕ್ರಮ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಹಿಲ್ಸ್ ನೂತನ ಕ್ಲಬ್ ನ ಉದ್ಘಾಟನೆ ಹಾಗೂ ಕ್ಲಬ್ ನ ಸನದ್ದು ಪ್ರದಾನ ಸಮಾರಂಭದ ಅದ್ದೂರಿ ಕಾರ್ಯಕ್ರಮ ಸೋಮವಾರ ಸಂಜೆ ಬಂಟ್ವಾಳ ಸಮೀಪದ ಲೋರೆಟ್ಟೊ ಚರ್ಚ್ ಹಾಲ್ ನಲ್ಲಿ ನಡೆಯಿತು.

ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ಎಂ.ಎಂ.ಸುರೇಶ್ ಚೆಂಗಪ್ಪ ಅವರು ನೂತನ ಕ್ಲಬ್ ನ ಉದ್ಘಾಟಿಸಿ, ಸನ್ನದು ಪ್ರದಾನ ಮಾಡಿದರು. ಬಳಿಕ ಅವರು ಮಾತನಾಡಿ ಆರಂಭದ ಹಂತದಲ್ಲೇ ರೋಟರಿ ಸಭಾಂಗಣಕ್ಕೆ ಶಿಲನ್ಯಾಸ ಮಾಡುವ ಮೂಲಕ ಲೊರೆಟ್ಟೋ ಹಿಲ್ಸ್ ಕ್ಲಬ್ ಉತ್ತಮ ದೃಷ್ಟಿಕೋನದಲ್ಲಿ ಮುಂದುವರೆಯುವ ಸೂಚನೆ ನೀಡಿದೆ. ಈ ಕ್ಲಬ್ ಮೂಲಕ ಹಲವಾರು ಸಮಾಜ ಮುಖಿ ಕಾರ್ಯಗಳು ನಡೆಯಲಿ ಎಂದರು.

ಲೋರೆಟ್ಟೊ ಚರ್ಚ್‌ನ ಧರ್ಮಗುರು ಎಲಿಯಾಸ್ ಡಿ ಸೋಜ ಆಶೀರ್ವಚನ ನೀಡಿದರು. ಬಂಟ್ವಾಳ ರೋಟರಿ ಕ್ಲಬ್ ಒಂಭತ್ತು ತಿಂಗಳ ಕಾಲಾವಕಾಶದಲ್ಲಿ ಎರಡು ಮಕ್ಕಳಿಗೆ ಜನ್ಮ ನೀಡಿದೆ ಎಂದರು.
ವಲಯ-೪ ರ ಅಸಿಸ್ಟೆಂಟ್ ಗವರ್ನರ್ ಎ.ಎಂ.ಕುಮಾರ್, ಎಕ್ಸ್‌ಟೆನ್ಶನ್ ಚೇಯರ್ ಮೆನ್ ಡಾ.ಅರವಿಂದ ಭಟ್, ಮೆಂಬರ್‌ಶಿಪ್ ಡೆವಲಪ್ ಮೆಂಟ್ಚೆಯರ್‌ಮೆನ್ ಸತೀಶ್ ಬೋಳಾರ್ ರೋಟರಿ ಕ್ಲಬ್ ನ ಗವರ್ನರ್ ವಿಶೇಷ ಪ್ರತಿನಿಧಿ ಎನ್.ಪ್ರಕಾಶ್ ಕಾರಂತ, ಚುನಾಯಿತ ಗವರ್ನರ್ ರೋಹಿನಾಥ ಪಾದೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು. ಬಂಟ್ವಾಳ ರೋಟರಿ ಕ್ಲಬ್ ಅಧ್ಯಕ್ಷ ಬಿ.ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕ್ಲಬ್ ನ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ ವೇದಿಕೆಯಲ್ಲಿದ್ದರು.

ನೂತನ ಕ್ಲಬ್ ನಲ್ಲಿ ಈಗಾಗಲೇ 73 ಮಂದಿ ಆರಂಭಿಕ ಸದಸ್ಯರಾಗಿ ನೋಂದಾಯಿಸಿಕೊಂಡಿದ್ದು ಗಣ್ಯರಿಂದ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಕಳೆದ ಆಗಸ್ಟ್ ನಲ್ಲಿ ನಡೆದ ಸಭೆಯಲ್ಲಿ ಕ್ಲಬ್ ನ ಅಧ್ಯಕ್ಷರನ್ನಾಗಿ ಅವಿಲ್ ಮಿನೇಜಸ್ ಲೋರೆಟ್ಟೊ ಮತ್ತು ಕಾರ್ಯದರ್ಶಿಯಾಗಿ ಪ್ರಭಾಕರ ಪ್ರಭು ಕರ್ಪೆ ಅವರನ್ನು ಆಯ್ಕೆ ಮಾಡಲಾಗಿದ್ದು ಈ ಸಮಾರಂಭದಲ್ಲಿ ಅವರು ಇತರ ಪದಾಧಿಕಾರಿಸಗಳೊಂದಿಗೆ ಸನ್ನದ್ದು ಸ್ವೀಕರಿಸಿದರು. ಬಂಟ್ವಾಳ ರೋಟರಿ ಕ್ಲಬ್ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,ಹಲವು ಪ್ರಶಸ್ತಿಯನ್ನು ಪಡೆಯುವ ಮೂಲಕ ಜಿಲ್ಲೆಯಲ್ಲೇ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾಗಿ ಗುರುತಿಸಿದೆ. ಇದೀಗ ರೋಟರಿ ಕ್ಲಬ್ ಬಂಟ್ವಾಳ ಲೋರೆಟ್ಟೊ ಕ್ಲಬ್ ಸ್ಥಾಪನೆಯಿಂದ ಈ ಭಾಗದ ಜನರಿಗೆ ಪ್ರಯೋಜನವಾಗಲಿದೆ .

Related posts

Leave a Reply