Header Ads
Header Ads
Header Ads
Breaking News

ವಂದೇಮಾತರಂ ಗಾಯನ ಕಾರ್ಯಕ್ರಮ, ಸ್ವಾಮಿ ವಿವೇಕಾನಂದರ 155 ನೇ ಜನ್ಮದಿನದ ಪ್ರಯುಕ್ತ ವಂದೇಮಾತರಂ ಗಾಯನದ ಮೂಲಕ ವಿಶ್ವದಾಖಲೆ.

 
ಸಂವೇದನ ಫೌಂಡೇಶನ್ ವತಿಯಿಂದ ಸ್ವಾಮಿ ವಿವೇಕನಂದರ 155 ನೇ ಜನ್ಮದಿನಾಚರಣೆಯ ಪ್ರಯುಕ್ತ 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಂಪೂರ್ಣ ವಂದೇ ಮಾತರಂ ಗಾಯನವನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕರಾದ ಪ್ರಕಾಶ್ ಮಲ್ಪೆ ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 13 ರಂದು ವಂದೇ ಮಾತರಂ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಲ್ಪೆ ಕಡಲ ತೀರದಲ್ಲಿ ಮದ್ಯಾಹ್ನ ನಾಲ್ಕು ಗಂಟೆಗೆ 2000 ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಲು‌ಇಂದ ಏಕ ಕಾಲದಲ್ಲಿ ಹಿನ್ನಲೆ ಸಂಗೀತದೊಂದಿಗೆ ವಂದೇ ಮಾತರಂ ಮೊಳಗಲಿದೆ. ಏಕ ಕಾಲದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಡುವುದರಿಂದ ಈ ಕಾರ್ಯಕ್ರಮ ವಿಶ್ವ ದಾಖಲೆಯಾಗಿದೆ. ಈ ಕಾರ್ಯಕ್ರಮ ಗೋಲ್ಡನ್ ಬುಕ್ಕ್ ಆಫ್ ರೆಕಾರ್ಡ್‌ಸ್‌ನಲ್ಲಿ ವಿಶ್ವ ದಾಖಲೆಯಾಗಲಿದೆ.ಶೋಭಾ ಯಾತ್ರೆಯಲ್ಲಿ 200 ಮೀಟರ್ ಉದ್ದದ ತಿರಾಂಗ ಧ್ವಜದೊಂದಿಗೆ ರಾಷ್ಟ್ರ ಭಕ್ತಿಯನ್ನು ಉದ್ದೀಪನ ಗೊಳಿಸುವ ಸ್ತಂಭ್ದ ಚಿತ್ರಗಳು ಭಾಗವಹಿಸಲಿದೆ. ವಿದ್ಯಾರ್ಥಿಗಳ ಜೊತೆಗೆ ನಾಡಿನ ಖ್ಯಾತ ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ನ ಸಂಗೀತ ರವಿಚಂದ್ರನ್ ಮಾಲಿನಿ ಕೇಶವ್ ಪ್ರಸಾದ್ ಸೇರಿದಂತೆ 20 ಕ್ಕೂ ಹೆಚ್ಚು ಕಲಾವಿದರು ಧ್ವನಿಗೂಡಿಸಲಿದ್ದಾರೆ ಎಂದರು.

Related posts

Leave a Reply