Header Ads
Header Ads
Breaking News

ವಜ್ರಮಹೋತ್ಸವದ ಸಂಭ್ರಮದಲ್ಲಿ ಸುರತ್ಕಲ್ ಎನ್‌ಐಟಿಕೆ

ಶೈಕ್ಷಣಿಕ ಸಾಲಿನಲ್ಲಿ ಎನ್.ಐ.ಟಿ.ಕೆ. ಸುರತ್ಕಲ್ ತನ್ನ ಸ್ಥಾಪನೆಯ ವಜ್ರ ಮಹೋತ್ಸವ ವರ್ಷವನ್ನು ಆಚರಿಸಿಕೊಳ್ಳುತ್ತಿದೆ. ಈ ವಜ್ರ ಮಹೋತ್ಸವ ವರ್ಷದ ಸಂದರ್ಭದ ಮೈಲುಗಲ್ಲಾಗಿ ವಿದ್ಯಾ ಸಂಸ್ಥೆಯ 17ನೇ ಘಟಿಕೋತ್ಸವ ನ.2ರಂದು ನೂತನ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ ಎಂದು ಪ್ರೊ.ಅನಂತ ನಾರಾಯಣ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಕರ್ನಾಟಕ ರಾಜ್ಯಪಾಲ ವಜುಭಾಯ್ ವಾಲ ಗೌರವ ಅತಿಥಿಯಾಗಿ ಭಾಗವಹಿಸುವರು ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ.ಕೆ.ಉಮೇಶ್ ರಾವ್, ಕೆ.ರವೀಂದ್ರನಾಥ್, ಪ್ರೊ.ಎ.ನಿತ್ಯಾನಂದ ಶೆಟ್ಟಿ, ಡಾ.ಎಂ.ಅರುಣ್ ಎಂ. ಇಸ್ಲೂರ್, ರಂಗನಾಥ್ ಉಪಸ್ಥಿತರಿದ್ದರು.

 

Related posts

Leave a Reply

Your email address will not be published. Required fields are marked *