Header Ads
Header Ads
Breaking News

ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಹಬ್ಬದ ಖರೀದಿಯ ಭರಾಟೆ ಬಲು ಜೋರು

 

ಮಂಗಳೂರು: ನಿರಂತರ ಬರಬರ ಪರಿಸ್ಥಿತಿಯಿಂದಾಗಿ ಟೊಮೆಟೋ ಸಿಹತ ಎಲ್ಲ ವಸ್ತುಗಳ ಬೆಲೆ ಏರಿದ್ದರೂ ಹಬ್ಬಗಳ ಸಂಭ್ರಮಗಳಿಗೇನೂ ಅಡ್ಡಿಯಾಗಿಲ್ಲ. ನಾಗರ ಪಂಚಮಿ ಮುಗಿದಿದೆ. ವರಮಹಾಲಕ್ಷ್ಮೀ ಹಬ್ಬ ನಡೆಯುತ್ತಿದೆ. ಇದೇ ತಿಂಗಳಾಂತ್ಯದಲ್ಲಿ ಗಣೇಶನ ಹಬ್ಬ ಕೂಡ ಬರಲಿದೆ. ಈಗಿನಿಂದಲೇ ಹಬ್ಬದ ಸಿದ್ಧತೆಗಳು ಆರಂಭಗೊಂಡಿರುವುದು ಕಂಡು ಬರುತ್ತಿದೆ.
ಮಂಗಳೂರು ನಗರ ಹಂಪನಕಟ್ಟೆ, ಸೆಂಟ್ರಲ್ ಮಾರ್ಕೆಟ್, ಕಂಕನಾಡಿ, ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗ್ರಾಹಕರು ಹಬ್ಬದ ಸಾಮಾಗ್ರಿಗಳನ್ನು ಕೊಳ್ಳಲು ಬರುತ್ತಲೇ ಇದ್ದಾರೆ. ಹೂವು, ಹಣ್ಣಿನ ವ್ಯಾಪಾರ ಕೂಡ ಜೋರಾಗಿಯೇ ಇದೆ.


ಮಾರುಕಟ್ಟೆಯಲ್ಲಿ ಹೂವು-ಹಣ್ಣಿನ ಬೆಲೆ ಏರಿದ್ದು, ಹೂವಿನ ಬೆಲೆಯಲ್ಲಿ ಏರಿಳಿತ ನಿರಂತರವಾಗಿದೆ. ಮಲ್ಲಿಗೆ ಮತ್ತು ಗೊಂಡೆ ಹೂವು ಬೇಡಿಕೆ ಹೆಚ್ಚಾಗಿದೆ.
ವರಲಕ್ಷ್ಮಿ ಹಬ್ಬ ಸೇರಿದಂತೆ ಹಬ್ಬದ ಸಂಭ್ರಮಗಳ ಸಂದರ್ಭದಲ್ಲಿ ಬೆಂಗಳೂರಿನ ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಆಯ್ದ ಹಣ್ಣುಗಳ ಮೇಲೆ ಶೇ.೫ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ನಡೆಯುತ್ತದೆ. ಆದರೆ ಇಂತಹ ರಿಯಿಯಿತಿ ಮಂಗಳೂರು ಹಾಪ್ಸ್‌ಕಾಮ್‌ಗಳಲ್ಲಿ ಗ್ರಾಹಕರಿಗೆ ಸಿಗುತ್ತಿಲ್ಲ. ಬದಲಾಗಿ ಉಳಿವರಿಗಿಂತ ಇವರೇ ಹೆಚ್ಚು ಸುಲಿಯುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಸೇಬು, ಮೂಸಂಬಿ, ಕಿತ್ತಳೆ, ತೆಂಗಿನಕಾಯಿ, ಬೆಂಗಳೂರು ನೀಲಿ ದ್ರಾಕ್ಷಿ, ಅನಾನಸ್, ಸೀತಾಫಲ, ಸೀಬೆ ಹಾಗೂ ಬಾಳೆಹಣ್ಣು ಗಳ ಮಾರಾಟ ಭರದಿಂದ ಸಾಗಿದೆ.
ಹಬ್ಬಗಳ ಸಂದರ್ಭದಲ್ಲಿ ಹೂವು-ಹಣ್ಣಿನ ದರದಲ್ಲಿ ಏರಿಕೆ ಸಾಮಾನ್ಯ. ಕಳೆದ ಹಬ್ಬಗಳಿಗೆ ಹೋಲಿಕೆ ಮಾಡಿದರೆ, ಬೆಲೆ ಹೆಚ್ಚಾಗಿದೆ ಎಂದೆನಿಸುತ್ತದೆ ಆದರೆ ಜನರು ಖರೀದಿ ಮಾಡುವುದು ಮಾತ್ರ ಕಡಿಮೆ ಮಾಡಿಲ್ಲ. ಮಧ್ಯಮವರ್ಗದ ಜನರು ತಮ್ಮ ಎಂದಿನ ಸಂಕಷ್ಟ ಬದಿಗಿಟ್ಟು ಹಬ್ಬದ ಸಂಭ್ರಮ ಅನುಭವಿಸಲು ಸಿದ್ದರಾಗಿದ್ದಾರೆ. ಬಡವರು ಮಾತ್ರ ಎಂದಿನಂತೆ ಇದ್ದುದರಲ್ಲಿ ಸುಧಾರಿಸುವ ಮನಃ ಸ್ಥಿತಿಯಲ್ಲಿದ್ದಾರೆ.

Related posts

Leave a Reply