Header Ads
Header Ads
Breaking News

ವರ್ಕಾಡಿ ಗ್ರಾ. ಪಂ. ಜಂಟಿ ಆಶ್ರಯದಲ್ಲಿ ನಡೆದ ಕೃಷಿಕರ ಸಭೆ

 ಕೇರಳ ಕೃಷಿ ಅಭಿವೃದ್ದಿ ಕೃಷಿಕ ಕ್ಷೇಮ ಇಲಾಖೆಯ ವರ್ಕಾಡಿ ಗ್ರಾ. ಪಂ. ನ ಜನಪರ ಯೋಜನೆ 2019-20ರ ಕಾಲಾವಧಿಯಲ್ಲಿ ವಿವಿಧ ಯೋಜನೆಗಳ ಬಗ್ಗೆ ಕೃಷಿಕರಲ್ಲಿ ಜಾಗೃತಿಯನ್ನು ಮೂಡಿಸಿ ತನ್ಮೂಲಕ ಕೃಷಿ ವಲಯವನ್ನು ಉನ್ನತಿಗೇರಿಸುವ ಉದ್ದೇಶದಿಂದ ಕೇರಳ ಕೃಷಿ ಅಭಿವೃದ್ದಿ ಕೃಷಿಕ ಕ್ಷೇಮ ಇಲಾಖೆ ಹಾಗೂ ವರ್ಕಾಡಿ ಗ್ರಾ. ಪಂ. ಜಂಟಿ ಆಶ್ರಯದಲ್ಲಿ ವಾರ್ಡು ಮಟ್ಟದಲ್ಲಿ ಆಯೋಜಿಸಲಾಗಿದ್ದ ಕೃಷಿಕರ ಸಭೆ ಸಮಾಪ್ತಿಗೊಂಡಿತು.

ಸಭೆ ನಡೆದ ಸ್ಥಳಗಳಲ್ಲಿ ಕೃಷಿಕರಿಗೆ ಅವರು ಬೆಳೆದ ಕೃಷಿ ಉತ್ಪನ್ನಗಳನ್ನು ಅವರದೇ ಜವಾಬ್ದಾರಿಯಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಸೌಕರ್ಯವನ್ನು ಏರ್ಪಡಿಸಲಾಗಿತ್ತು. ಈ ಮೂಲಕ ಕೃಷಿ ಅಭಿವೃದ್ದಿ ಯೋಜನೆಯಲ್ಲಿ ಕೃಷಿಕರ ಪಾಲುದಾರಿಕೆಯನ್ನು ದೃಢಗೊಳಿಸುವ ಹಾಗೂ ಸ್ಥಳೀಯ ಕೃಷಿಕರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಅವರ ಅಭಿಪ್ರಾಯಗಳನ್ನು ಹಾಗೂ ನಿರ್ದೇಶನಗಳನ್ನು ಪಡೆದು ಸಭೆಯಲ್ಲಿ ಸೂಕ್ತವಾದ ಸಲಹೆಗಳನ್ನು ಕೂಡಾ ನೀಡಲಾಯಿತು.ಗುರುವಾರದಂದು ಬಾಕ್ರಬೈಲ್ ಎಯುಪಿ ಶಾಲೆಯಲ್ಲಿ ನಡೆದ ಕೃಷಿಕರ ಸಭೆಯನ್ನು ವರ್ಕಾಡಿ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿಎ ಉದ್ಘಾಟಿಸಿದರು. ಬಳಿಕ ಮಾತನಾಡಿದ ವಾರ್ಡ್ ಮಟ್ಟದಲ್ಲಿ ನಾವು ಕೃಷಿಕರನ್ನು ಒಟ್ಟು ಗೂಡಿಸಿ ಅವರ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ದಾಖಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಕೃಷಿವಲಯಕ್ಕೆ ಇನ್ನೂ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಗುವುದಾಗಿ ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಬಳಿಕ ಕೃಷಿ ಅಧಿಕಾರಿ ಶಫೀಕ್ ಎಂ ಮಾತನಾಡಿ – ಕೃಷಿ ಭವನದಿಂದ ಲಭಿಸುವ ಸವಲತ್ತುಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡಿದ ಅವರು ಕೃಷಿ ಮಾಡಲು ಒಂದು ಹೆಕ್ಟೇರ್ ಗೆ 5500ರೂ. ನಂತೆ ಕೃಷಿ ಇಲಾಖೆ ಸಹಾಯವನ್ನು ನೀಡುತ್ತಿದೆ ಎಂದ್ರು.

ಬಳಿಕ ವರ್ಕಾಡಿ ಕೃಷಿ ವಿ????ನ ಕೇಂದ್ರದ ಪ್ರೊಫೆಸರ್ ಶ್ರೀ ಅನೂಪ್‌ರವರು ಮಾತನಾಡಿ  ಕೃಷಿವಲಯವನ್ನು ಯಾವ ರೀತಿಯಲ್ಲಿ ಅಭಿವೃದ್ದಿ ಪಡಿಸಬಹುದು ಎಂಬುದರ ಬಗ್ಗೆ ಸಮಗ್ರವಾದ ಮಾಹಿತಿ ನೀಡಿದರು. ಪಂ. ಸದಸ್ಯೆ ಮೈಮೂನ ಆಹ್ಮದ್ ಅಧ್ಯಕ್ಷತೆ ವಹಿಸಿದರು. ವರ್ಕಾಡಿ ಗ್ರಾ. ಪಂ. ನಿಕಟಪೂರ್ವ ಅಧ್ಯಕ್ಷ ಅಬೂಬಕ್ಕರ್ ಪಾತೂರು, ಬಾಕ್ರಾಬೈಲ್ ಶಾಲೆಯ ಮುಖ್ಯೋಪಧ್ಯಾಯ ಪಿ ಬಿ ಶ್ರೀನಿವಾಸ್ ರಾವ್, ಸುರೇಶ್, ಇಂಜಿನೀಯರ್ ಅನ್ಸಾರ್ ಆನೆಕಲ್ಲು , ಮುರಳೀ ಕ್ರಷ್ಣ, ಕ್ರಷಿಕರಾದ ವಸಂತ ಭಂಡಾರಿ, ಕೆ ವಿಠಲ್ ನಾಯ್ಕ್, ನೇಮಿರಾಜ ಶೆಟ್ಟಿ, ರಮೇಶ್ ಬಾಕ್ರಾ ಬೈಲ್ ಸೇರಿದಂತೆ ಹಲವರು ಕಾರ್ಯಕ್ರಮಕ್ಕೆ ಶುಭಹಾರೈಸಿದ್ರು. ವೇದಿಕೆಯಲ್ಲಿ ಕೃಷಿಕರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

Related posts

Leave a Reply

Your email address will not be published. Required fields are marked *