Header Ads
Header Ads
Breaking News

ವರ್ಗಾವಣೆಗೊಂಡ ತಹಸೀಲ್ದಾರ್‌ರಿಗೆ ಸುಳ್ಯ ಪಂಚಾಯತ್ ನಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

ನಾನು ಬರಿಗೈಯಲ್ಲಿ ಸುಳ್ಯಕ್ಕೆ ಬಂದೆ. ಇದೀಗ ಅಭೂತ ಪೂರ್ವ ಜನ ಪ್ರೀತಿಯ ಸೆಳೆಯೊಂದಿಗೆ ಹೋಗುತ್ತಿದ್ದೇನೆ. ಜನ ಪ್ರೀತಿ ಕಂಡಾಗ ವರ್ಗಾವಣೆ ಕೇಳಿಕೊಳ್ಳಬಾರದಿತ್ತೊ ಎಂದೆನಿಸುತ್ತದೆ. ಆದರೆ ಕಾಲ ಮಿಂಚಿದೆ. ಸುಳ್ಯವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ವರ್ಗಾವಣೆಗೊಂಡ ಸುಳ್ಯ ತಹಸೀಲ್ದಾರ್ ಕುಂಞಿ ಆಹಮ್ಮದ್ ಹೇಳಿದ್ದಾರೆ.

ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಸುಳ್ಯ ನ.ಪಂ. ಹಾಗೂ ಸ್ವಚ್ಛ ನಗರ ಸುಳ್ಯ ತಂಡದ ವತಿಯಿಂದ ನಡೆದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸುಳ್ಯದ ಜನರು ಮುಗ್ಧರು.ಯಾವುದೇ ಕೆಲಸಕ್ಕೆ ಅಧಿಕಾರಿಗಳ ಬಳಿ ಹೋದರೆ ಯಾವ ರೀತಿಯಲ್ಲಿಯೂ ವಿಚಾರಿಸುವುದಿಲ್ಲ. ಜನರು ಪ್ರಶ್ನೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲವೂ ಸಾಧ್ಯವಿದೆ ಅದನ್ನು ಸರಿಯಾಗಿ ಜನರು ಬಳಸಿಕೊಳ್ಳಬೇಕು. ಸುಳ್ಯದಲ್ಲಿ ಹಲವು ಸಮಸ್ಯೆಗಳಿಗೆ ಅವುಗಳನ್ನು ನಿವಾರಿಸಲು ಅಧಿಕಾರಿಗಳು ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಹೇಳಿದರು. ಈ ಸಂದರ್ಭ ಸುಳ್ಯ ನ.ಪಂ. ಮುಖ್ಯಾಧಿಕಾರಿ ಮತ್ತಡಿ, ನ.ಪಂ. ಸದಸ್ಯರಾದ ಎಂ. ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸರೋಜಿನಿ ಪೆಲತ್ತಡ್ಕ, ಸ್ವಚ್ಛ ನಗರ ತಂಡದ ಪಿ.ಬಿ. ಸುಧಾಕರ್ ರೈ, ವಿನೋದ್ ಲಸ್ರಾದೊ, ಹಾಗೂ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *