Header Ads
Header Ads
Breaking News

 ವರ್ಷದ ಕೊನೆಯಲ್ಲಿ ಪೈಪ್‌ಲೈನ್ ಕಾಮಗಾರಿ ಪೂರ್ಣ : ಮಂಗಳೂರಿನಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ 

ಮಂಗಳೂರು ಕೊಚ್ಚಿ ಗ್ಯಾಸ್ ಪೈಪ್ ಲೈನ್ ಸಂಪರ್ಕ ವಿಚಾರಕ್ಕೆ ಸಂಬಂಧಿಸಿ ಕೇರಳ ಸರ್ಕಾರ ಸಹಕಾರ ನೀಡ್ತಿದೆ.ಈ ವರ್ಷದ ಕೊನೆಯಲ್ಲಿ ಪೈಪ್ ಲೈನ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಮಾತನಾಡಿ, ವರ್ಷಾಂತ್ಯದ ಒಳಗಾಗಿ ಗ್ಯಾಸ್ ಸಪ್ಲೈ ಪ್ರಕ್ರಿಯೆ ಆರಂಭ ಮಾಡಲಿದ್ದೇವೆ.ಕರ್ನಾಟಕ ಕೆಲವು ತಿಂಗಳಲ್ಲಿ ಹೊಗೆ ಮುಕ್ತವಾಗಲಿದೆ ಎಂದು ಹೇಳಿದರು. ರಾಜ್ಯ ಸರ್ಕಾರಕ್ಕೆ ಅಭಿವೃದ್ಧಿಯ ಸೂಕ್ತ ಅಜೆಂಡಾ ಇಲ್ಲ.
ಸಮಾಜ ಒಡೆಯೋ ಕೆಲಸ ಮಾಡ್ತಿದೆ.ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದೆ ಎಂದು ಆರೋಪಿಸಿದರು. ಎಂ.ಆರ್.ಪಿ.ಎಲ್ ಕಂಪನಿಯಿಂದ ಪರಿಸರ ಹಾನಿ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದೆ. ಭೂ ಸ್ವಾಧೀನ ವಿಚಾರಕ್ಕೆ ರಾಜ್ಯ ಸರ್ಕಾರದ ಸಲಹೆ ಆಧರಿಸಿ ಎಂ.ಆರ್.ಪಿ.ಎಲ್ ಕ್ರಮವಹಿಸಲಿದೆ ಎಂದು ತಿಳಿಸಿದರು.