Header Ads
Breaking News

ವರ್ಷದ ವ್ಯಕ್ತಿ ಪ್ರಶಸ್ತಿಗೆ ಕೆ. ಅಭಯಚಂದ್ರ ಜೈನ್ ಆಯ್ಕೆ

ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್, ಮಣಿಪಾಲ ಅಕಾಡಮಿ ಆಪ್ ಹೈಯರ್ ಎಜ್ಯುಕೇಶನ್, ಮಣಿಪಾಲ ಮೀಡಿಯಾ ನೆಟ್‍ವರ್ಕ್ ಮತ್ತು ಮಣಿಪಾಲ ಎಜ್ಯುಕೇಶನ್ ಮತ್ತು ಮೆಡಿಕಲ್ ಗ್ರೂಪ್ ನೀಡುವ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ಪಡೆದಿರುವ ಕೆ.ಅಭಯಚಂದ್ರಜೈನ್ ಅವರನ್ನು ಮಹಾವೀರ ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಅಭಿನಂದಿಸಲಾಯಿತು.ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‍ನ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸನ್ಮಾನಿಸಿ ಮಾತನಾಡಿ ಇಂದಿನ ಸಮಾಜದಲ್ಲಿ ಆದರ್ಶ ಸರಳ ಜೀವನ ನಡೆಸುವ ರಾಜಕಾರಣಿಗಳು ವಿರಳರಾಗುತ್ತಿದ್ದಾರೆ. ಅಂತಹ ವಿರಳ ರಾಜಕಾರಣಿಗಳಲ್ಲಿ ಅಭಯಚಂದ್ರ ಜೈನ್ ಒಬ್ಬರು. ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ಅಭಯಚಂದ್ರ ಜೈನ್ ಅವರು ಐದು ದಶಕಗಳ ಹಿಂದೆ ಎಸ್‍ಎನ್ ಮೂಡುಬಿದಿರೆ ಹಾಗೂ ಇತರರು ದೂರದೃಷ್ಟಿಯಿಟ್ಟುಕೊಂಡು ಮಹಾವೀರ ಕಾಲೇಜು ಸ್ಥಾಪನೆ ಮಾಡಿದ್ದು ಮೂಡುಬಿದಿರೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅಪಾರ. ಮಣಿಪಾಲದ ಋಣ ಮೂಡುಬಿದಿರೆಯ ಜನತೆಗಿದೆ ಎಂದರು.

ರಾಮಕೃಷ್ಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಭಟ್ ಅಭಿನಂದನಾ ಭಾಷಣ ಮಾಡಿ ಶ್ರಮ ಇಲ್ಲದ ಶ್ರೀಮಂತಿಕೆ, ಪ್ರಜ್ಞೆ ಇಲ್ಲದ ಸುಖ, ನೈತಿಕತೆ ಇಲ್ಲದ ಜ್ಞಾನ, ಮಾನವೀಯತೆ ಇಲ್ಲದ ವಿಜ್ಞಾನ, ತ್ಯಾಗವಿಲ್ಲದ ಧರ್ಮ ಹಾಗೂ ನೀತಿ ಇಲ್ಲದ ರಾಜಕೀಯದಿಂದ ದೂರ ಇದ್ದು ಸನ್ನಡತೆಯಿಂದ ಮಾದರಿಯಾಗಿ ಜೀವನ ನಡೆಸುತ್ತಿರುವವರು ಅಭಯಚಂದ್ರರು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಯ ಮುಖಂಡರುಗಳು ಗೌರವಿಸಿದರು. ಮಹಾವೀರ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಮಂಜುಳಾ ಅಭಯಚಂದ್ರ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾವೀರ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ಎಸ್‍ಎನ್‍ಪಾಲಿಟೆಕ್ನಿಕ್‍ನ ಪ್ರಾಂಶುಪಾಲ ಜೆ.ಜೆ.ಪಿಂಟೋ ಪರಿಚಯಿಸಿದರು. ಪಿಯು ಪ್ರಾಂಶುಪಾಲ ರಮೇಶ್ ಶೆಟ್ಟಿ ವಂದಿಸಿದರು. ನಳಿನಿ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *