Header Ads
Header Ads
Breaking News

ವಳಚ್ಚಿಲ್‌ನ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದಲ್ಲಿ 2019-20 ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಶಿಕ್ಷಕರ ದಿನಾಚರಣೆಯ ಸಮಾರಂಭ

ಮಂಗಳೂರಿನ ವಳಚ್ಚಿಲ್‌ನ ಶ್ರೀನಿವಾಸ ಔಷಧೀಯ ಮಹಾವಿದ್ಯಾಲಯದಲ್ಲಿ 2019-20 ಸಾಲಿನ ವಿದ್ಯಾರ್ಥಿ ಸಂಘದ ಪದಗ್ರಹಣ ಹಾಗೂ ಶಿಕ್ಷಕರ ದಿನಾಚರಣೆಯ ಸಮಾರಂಭದ ಉದ್ಘಾಟನೆಯನ್ನು 5 ಸೆಪ್ಟೆಂಬರ್ 2019ರಂದು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಮತ್ತು ಸೆನೆಟ್ ಸದಸ್ಯರು ಹಾಗೂ ಪ್ರೇಮಕಾಂತಿ ಎಜುಕೇಶನಲ್ ಮತ್ತು ಚಾರಿಟೇಬಲ್‌ಟ್ರಸ್ಘ್, ಮಂಗಳೂರು ಇದರ ಅಧ್ಯಕ್ಷರಾದ ಡಾ. ಕೆ ಶಿವ ಶರಣ್ ಇವರು ದೀಪ ಬೆಳಗಿಸಿ ಉದ್ಘಾಟಿಸಿ ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು ಇತರರನ್ನು ಯಶಸ್ಸಿನ ಕಡೆಗೆ ತಲುಪಿಸುವಲ್ಲಿ ಪ್ರೆರೇಪಿಸಬೇಕೆಂದು ಕರೆಯಿತ್ತರು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಪದ ಫಾರ್ಮಾ ಶ್ರೀ ಯನ್ನು ಬಿಡುಗಡೆ ಮಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಆರ್ ಶಬರಾಯ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಅಭಿನಂದಿಸುತ್ತಾ ಧ್ಯೇಯ ಹಾಗೂ ಮೌಲ್ಯತೆಗಳನ್ನು ಒಳಗೊಂಡು ಉತ್ತಮ ಕಾರ್ಯಕ್ರಮಗಳ ಹಮ್ಮಿಕೊಳ್ಳುವ ಮೂಲಕ ಮಾದರಿ ವಿದ್ಯಾರ್ಥಿ ಜೀವನ ಶ್ಯೆಲಿಯನ್ನು ಹೊಂದಬೇಕೆಂದು ಕರೆಯಿತ್ತರು.ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಅನುಷಾ ಶೆಟ್ಟಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪ್ರೊ. ಹರಿಪ್ರಕಾಶ್, ಯೋಗ ಮತ್ತು ಮೆಡಿಟೇಶನ್ ಟ್ರೈನರ್, ವಾಲೆಂಟೀರ್, ಆರ್ಟ್ ಆಫ್ ಲಿವಿಂಗ್, ಉಡುಪಿ ಇವರನ್ನು ಸನ್ಮಾನಿಸಲಾಯಿತು.ವಿದ್ಯಾರ್ಥಿ ಕೌನ್ಸಿಲ್ ಸಲಹೆಗಾರರಾದ ಡಾ.ಇ.ವಿ.ಎಸ್ ಸುಬ್ರಹ್ಮಣ್ಯಂ, ಡಾ.ಕೃಷ್ಣಾನಂದ ಕಾಮತ್, ಡಾ. ಪದ್ಮಾವತಿ ಪಿ ಪ್ರಭು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕುಮಾರಿ ಕೀರ್ತನಾ ಇವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಫಾತಿಮಾ ಮತ್ತು ಜೆಫಿ ಸನ್ನಿ ಕಾರ್ಯಕ್ರಮ ನಿರೂಪಿಸಿದರು. ಬಿಲಾಲ್ ಬಿನ್ ಫಿರೋಜ್ ಇವರು ವಂದನಾರ್ಪಣೆಗೈದರು.

Related posts

Leave a Reply

Your email address will not be published. Required fields are marked *