Breaking News

ವಾಕ್ -ಇನ್ ಇಂಟರ್‌ವ್ಯೂವ್ ಜುಲೈ 22ರಂದು ಸಹ್ಯಾದ್ರಿ ಕಾಲೇಜಿನಲ್ಲಿ ಆಯೋಜನೆ

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಜಿನಿಯರಿಂಗ್ ಪದವೀಧರರು ಡಿಪ್ಲಮಾ ಹೋಲ್ಡರ್‍ಸ್ ಮತ್ತು ಇತರ ಎಲ್ಲಾ ಶಾಖೆಯ ಪದವೀಧರ ವಿದ್ಯಾರ್ಥಿಗಳಿಗೆ ಕೇಂದ್ರೀಕೃತ ವಾಕ್ -ಇನ್ ಇಂಟರ್‌ವ್ಯೂವ್ ನಡೆಯಲಿದೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಾಲಕೃಷ್ಣ ಎಂಜಿನಿಯರಿಂಗ್ ಪದವೀಧರರಿಗೆ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಜುಲೈ 22ರಂದು ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ವಾಕ್ ಇನ್ ಇಂಟರ್‌ವ್ಯೂವ್ ಆಯೋಜಿಸಲಾಗಿದೆ.ಬೋರ್ಡ್ ಆಫ್ ಅಪ್ರೆಂಟಿಸ್ಶಿಪ್ ಟ್ರೈನಿಂಗ್ ಚೆನ್ನೈ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಉನ್ನತ ಶಿಕ್ಷಣ ಇಲಾಖೆಯ ಅಡಿಯಲ್ಲಿ ಸ್ವಾಯುತ್ತ ಅಂಗವಾಗಿದೆ. ಎಂಜಿನಿಯರಿಂಗ್‌ನಲ್ಲಿ ಹೊಸ ಎಂಜಿನಿಯರಿಂಗ್ ಪಧವೀಧರರು ಮತ್ತು ಡಿಪ್ಲಮೋ ಹಿದುವಳಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಆಯೋಜಕರಾದ ವಸಂತ, ರಶ್ಮಿ ಭಂಡಾರಿ, ಉಪಸ್ಥಿತರಿದ್ದರು.
ವರದಿ: ಶರತ್

Related posts

Leave a Reply