Header Ads
Breaking News

ವಾಣಿಜ್ಯಶಾಸ್ತ್ರದ ಪುಸ್ತಕಗಳ ಲೋಕಾರ್ಪಣೆ

ಧರ್ಮಸ್ಥಳ.ಜ9: ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಇತ್ತೀಚೆಗೆ ಉಜಿರೆ ಎಸ್.ಡಿ.ಎಮ್ ಕಾಲೇಜಿನ ವಾಣಿಜ್ಯ ವಿಭಾಗದ ಅದ್ಯಾಪಕರು ಬರೆದ 3 ಪುಸ್ತಕಗಳು ಬಿಡುಗಡೆಗೊಂಡವು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವಿರೇಂದ್ರ ಹೆಗ್ಗಡೆಯವರು ಈ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಶುಭಹಾರೈಸಿದರು.

ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಪಿ.ಎನ್ ಉದಯ ಚಂದ್ರ ಹಾಗೂ ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಕುಶಾಲಪ್ಪ.ಎಸ್ ಜಂಟಿಯಾಗಿ ರಚಿಸಿರುವ ’ಹ್ಯೂಮನ್ ರಿಸೊರ್ಸ್ ಮ್ಯಾನೇಜ್‌ಮೆಂಟ್’, ಡಾ.ಪಿ.ಎನ್ ಉದಯ ಚಂದ್ರ ಹಾಗೂ ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗದ ಅಧ್ಯಾಪಕರಾದ ಡಾ.ಪ್ರವೀಣ್ ಕುಮಾರ್ ರಚಿಸಿರುವ ’ರೆಟೇಲ್ ಮ್ಯಾನೆಜ್‌ಮೆಂಟ್’ ಎಂಬ ಪುಸ್ತಕಗಳು ಮತ್ತು ಕಾಲೇಜಿನ ವಾಣಿಜ್ಯ ಅಧ್ಯಾಪಕರುಗಳಾದ ಡಾ.ರಾಕೇಶ್ ಟಿ.ಎಸ್ ಮತ್ತು ಡಾ. ಲಕ್ಮೀನಾರಾಯಣ ಕೆ.ಎಸ್ ರಚಿಸಿರುವ ’ಅರ್ಗಿಕಲ್ಚರಲ್ ಮಾರ್ಕೆಟಿಂಗ್’ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಬೆಂಗಳೂರಿನ ಹಿಮಾಲಯ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕಗಳನ್ನು ಪ್ರಥಮ ಪದವಿ ವಿದ್ಯಾರ್ಥಿಗಳ ಪಠ್ಯಕ್ರಮಗಳಿಗೆ ಅನುಗುಣವಾಗಿ ಬರೆಯಲಾಗಿದೆ. ವಿಷಯಕ್ಕೆ ಅನುಗುಣವಾಗಿ ತಾತ್ವಿಕ ಸೈದಾಂತಿಕ ನೆಲೆಗಟ್ಟಿನ ಅಂಶಗಳನ್ನು ಇದು ಒಳಗೊಂಡಿದೆ. ವಾಸ್ತವ ವ್ಯವಹಾರಾಡಳಿತಕ್ಕೆ ಅನ್ವಯವಾಗುವ ಉದಾಹರಣೆಗಳು, ವಿಶ್ಣೇಷಣೆಗಳು ಹಾಗೂ ಪರೀಕ್ಷಾ ದೃಷ್ಟಿಕೋನದಲ್ಲಿ ಮಾದರಿ ಪ್ರಶ್ನೆಪತ್ರಿಕೆ ನೀಡಲಾಗಿದ್ದು ಹಚ್ಚಿನ ಓದಿಗಾಗಿ ಆಕಾರ ಗ್ರಂಥಗಳ ಪಟ್ಟಿಯನ್ನು ಹೊಂದಿದೆ ಎಂದು ಡಾ.ಪಿ.ಎನ್ ಉದಯ ಚಂದ್ರ ಈ ಸಂದರ್ಭದಲ್ಲಿ ಪುಸ್ತಕಗಳ ಪರಿಚಯ ಮಾಡಿಕೊಟ್ಟರು.

ಈ ಎಲ್ಲಾ ಪುಸ್ತಕಗಳು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಹಾಗೂ ಅವರೆಲ್ಲರ ಪ್ರಯತ್ನ ಯಶಸ್ವಿಯಾಗಲಿ ಎಂದು ಡಾ.ಡಿ. ವಿರೇಂದ್ರ ಹೆಗ್ಗಡೆ ಹಾರೈಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ ಜಯಕುಮಾರ್ ಶೆಟ್ಟಿ, ವಾಣಿಜ್ಯ ವಿಭಾಗದ ಅಧ್ಯಾಪಕಿ ಮಧುಶ್ರೀ, ಅಧ್ಯಾಪಕರುಗಳಾದ ಡಾ.ರಾಕೇಶ್ ಟಿ.ಎಸ್ ಮತ್ತು ಡಾ. ಲಕ್ಮೀನಾರಾಯಣ ಕೆ.ಎಸ್, ಮುರುಗಾನಂದನ, ಚಿದಾನಂದ ಹೆಚ್.ಎನ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *