Header Ads
Header Ads
Breaking News

ವಾಮಮಾರ್ಗದ ಮೂಲಕ ಬಿಜೆಪಿಯಿಂದ ಸಂವಿಧಾನದ ಕಗ್ಗೊಲೆ : ಕಾಂಗ್ರೆಸ್ ಮುಖಂಡ ಎಂ. ವೆಂಕಪ್ಪ ಗೌಡ

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ ಬಿಜೆಪಿ ನಡೆ ಸರಿಯಲ್ಲ. ನಾವು ಕಷ್ಟ ಪಟ್ಟು ದುಡಿದು ಸಂಪಾದನೆ ಮಾಡಿ ಅಧಿಕಾರ ಪಡೆದಿದ್ದೇವೆ. ಆದರೆ ಬಿಜೆಪಿ ಇಂದು ಯಾರದೋ ಕಿಸೆಗೆ ಕೈ ಹಾಕಿ ದರೋಡೆ ಮಾಡಿದೆ. ಈ ಸಂಪತ್ತು ಶಾಶ್ವತವಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು ಎಂದು ಕೆ.ಪಿ.ಸಿ.ಸಿ. ಮಾಜಿ ಕಾರ್ಯದರ್ಶಿ ಹಾಗೂ ಸುಳ್ಯ ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಡವಳಿಕೆ ಸಂವಿಧಾನದ ಕಗ್ಗೊಲೆ. ಮುಂದೆ ಇದರ ಪರಿಣಾಮ ಗೊತ್ತಾಗುತ್ತದೆ. ಹೀಗೆ ವಾಮಮಾರ್ಗದಲ್ಲಿ ಎಲ್ಲ ರಾಜ್ಯಗಳಲ್ಲೂ ಅಧಿಕಾರ ಹಿಡಿಯಲು ಪ್ರಯತ್ನಿಸಿದರೆ ಜನ ದಂಗೆ ಏಳುವ ಸ್ಥಿತಿ ಬರಬಹುದು ಎಂದು ಹೇಳಿದರು. ಬಿಜೆಪಿ ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಖರೀದಿ ಮಾಡಿದೆ. ಅದು ಸರಿ ಎಂದಾದರೆ ಇಲ್ಲಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಸಹಕಾರ ಭಾರತಿಯವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯ ಪರ ಮತ ಚಲಾಯಿಸಿದರೆ ಇವರಿಗೆ ಯಾಕೆ ಹೊಟ್ಟೆ ಉರಿ ? ಯಾಕೆ ಅಂತವರನ್ನು ಬಲಾತ್ಕಾರದಿಂದ ರಾಜೀನಾಮೆ ಕೊಡಿಸಿದಿರಿ? ಎಂದು ಪ್ರಶ್ನಿಸಿದ ವೆಂಕಪ್ಪ ಗೌಡರು, ಸುಳ್ಯ ನ.ಪಂ.ನಲ್ಲಿ ನಾವು 4 ಸ್ಥಾನ ಗೆದ್ದಿದ್ದೇವೆ. 2 ಮಂದಿ ಪಕ್ಷೇತರರು ನಮ್ಮ ಜೊತೆಗಿದ್ದಾರೆ. ನಾವು ಅಧಿಕಾರ ನಡೆಸುತ್ತೇವೆ ಎಂದು ಬಿಜೆಪಿಯವರಿಗೆ ಆಹ್ವಾನ ಕೊಟ್ಟರೆ ಅವರ ಸದಸ್ಯರು ಬರುತ್ತಾರೆಯೇ? ಅದು ಸರಿ ಕಾಣುತ್ತದೆಯೇ? ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಧರ್ಮಪಾಲ ಕೊಯಿಂಗಾಜೆ, ಮಹಮ್ಮದ್ ಪವಾಝ್ ಕನಕಮಜಲು, ಲಕ್ಷ್ಮಣ ಶೆಣೈ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *