

ಸಮಾಜಮುಖಿ ಸೇವೆಯಮೂಲಕ ಜನಸೇವೆ ಯ ಮೂಲ ಆಧಾರಸ್ತಂಭ ವಾದ ಲಕ್ಕೀ ಬ್ರದರ್ಸ್ ಆರ್ಟ್ಸ್ &ಸ್ಪೋರ್ಟ್ ಕ್ಲಬ್ ಬಂಗ್ರ ಮಂಜೇಶ್ವರದ ಬೆಳ್ಳಿಹಬ್ಬದ ಪ್ರಯುಕ್ತ ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮದ ಸಲುವಾಗಿ ಆಯೋಜಿಸಿದ ತುಳುನಾಡಿನ ಪ್ರತಿಭಾನ್ವಿತರಿಗೆ ಸಂಗೀತ ಅಭಿಮಾನಿಗಳಿಗೆ ಮ್ಯೂಸಿಕ್ ರಿಯಾಲಿಟಿ ಶೋ” ವಾಯ್ಸ್ ಓಫ್ ತುಳುನಾಡು -2021″
ಸಂಗೀತ ಸ್ಪರ್ಧೆ ಯ ಗ್ರೇಂಡ್ ಫಿನಾಲೆ ವ್ಯಾಪಾರಿ ಸಭಾಭವನ ಹೊಸಂಗಡಿಯಲ್ಲಿ ಸಂಪನ್ನಗೊಂಡಿತು. ಮಂಜೇಶ್ವರದ ಕಲಾಕ್ಷೇತ್ರಕ್ಕೆ ಹೊಸ ಇತಿಹಾಸ ಬರೆಯುವ ವಾಯ್ಸ್ ಓಫ್ ತುಳುನಾಡು ಸಂಗೀತ ಸ್ಪರ್ಧೆಯಲ್ಲಿ ಅನುಜ್ಞಾ ಲಕ್ಷ್ಮೀ ಪ್ರಥಮ, ದೀಕ್ಷಾ ಶೆಟ್ಟಿ ಮುಳಿಂಜ ದ್ವಿತೀಯ,ವಿಕ್ರಮ್ ಭಾರದ್ವಾಜ್ ತೃತೀಯ ಸ್ಥಾನ ಪಡೆದರು. ಸಂಗೀತಲೋಕದ ಪ್ರಸಿಧ್ಧ ಗಾಯಕರೂ , ನಿರ್ದೇಶಕರು, ಸಾಹಿತಿಗಳೂ,ಆದ ಶ್ರೀ ಬಾಲಕೃಷ್ಣ ನೆಟ್ಟಾರ್, ಸಾಹಿತಿ ಶ್ರೀ ಹರೀಶ್ ಕುಂಬ್ಳೆ,ಮತ್ತು ಗಾಯಕ ಉಸ್ಮಾನ್ ಉಪ್ಪಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವಿನಾ ಮೊಂತೆರೋ ಶ್ರೀ ಸಿದ್ದೀಕ್ ಮಂಜೇಶ್ವರ,ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಮ್ಮದ್ ರಫೀಕ್,ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯರಾದ ಶ್ರೀ ಅಬ್ದುಲ್ ಹಮೀದ್,ಶ್ರೀಬಶೀರ್ ಕನಿಲ, ಶ್ರೀಅಬ್ದುಲ್ ಅಝೀಝ್ ಹಾಜಿ ಮೊದಲಾದವರು ಪಾಲ್ಗೊಂಡರು.