Header Ads
Breaking News

ವಾರದಿಂದ ರೇಷನ್ ಪಡೆಯಲು ಪರದಾಡುತ್ತಿರುವ ಪಡುಬಿದ್ರಿ ಜನತೆ

ಪಡುಬಿದ್ರಿ ನ್ಯಾಯಬೆಲೆಯಂಗಡಿಯಲ್ಲಿ ಸರ್ವರ್ ಸ್ಲೂ ಎಂಬ ಕಾರಣ ಹೇಳಿ ಒಂದು ವಾರದಿಂದ ರೇಶನ್ ನೀಡಲು ವಿಳಂಬಿಸುತ್ತಿದ್ದು, ಈ ವರೆಗೂ ಸರ್ವರ್ ಸಮಸ್ಯೆಯನ್ನು ನೀಗಿಸಲು ವಿಫಲವಾದ ಕಾರಣ, ಗ್ರಾಹಕರು ದಿನಗಟ್ಟಲೆ ನ್ಯಾಯಬೆಲೆ ಅಂಗಡಿ ಮುಂಭಾಗದ ಸಾಲುಗಟ್ಟಿ ನಿಲ್ಲುವ ಸ್ಥಿತಿ ನಿರ್ಮಾಣಗೊಂಡಿದೆ ಎಂಬುದಾಗಿ ಗ್ರಾಹಕಿ ಶೋಭ ಆಚಾರ್ಯ ದೂರಿದ್ದಾರೆ.

ಕಳೆದ ಒಂದು ವಾರದಿಂದ ರೇಶನ್ ಸಾಮ್ರಾಗಿಗಳನ್ನು ಪಡೆಯಲು ನ್ಯಾಯ ಅಂಗಡಿಗೆ ಬಂದು ಕಾದು ಕಾದು ಮರಳುತ್ತಿದ್ದೇನೆ, ಇದೀಗ ಮತ್ತೆ ಬಂದರೂ ಅದೇ ಸ್ಥಿತಿ, ಮನೆ ಕೆಲಸವನ್ನು ಮಾಡುವ ಒತ್ತಡದಲ್ಲಿರುವ ನಾವು ರೇಶನ್ ಪಡೆಯಲು ಬಂದರೆ ಇಲ್ಲಿನ ದುಸ್ಥಿತಿ ವಾರವಾದರೂ ಸರಿಯಾಗಿಲ್ಲ, ರೇಶನ್ ನೀಡುವವರಲ್ಲಿ ವಿಚಾರಿಸಿದರೆ ಸರ್ವರ್ ಸಮಸ್ಯೆಯಿಂದಾಗಿ ಒರ್ವ ಗ್ರಾಹಕರ ತಮ್ ಪಡೆದೆ ರೇಶನ್ ನೀಡಲು ಕಡಿಮೆ ಎಂದರೆ ಹತ್ತು ನಿಮಿಷವಾದರೂ ಬೇಕು ನಾವೇನೂ ಮಾಡುವಂತ್ತಿಲ್ಲ ಎನ್ನುತ್ತಾರೆ. ಸರ್ಕಾರ ನಮ್ಮಂಥಹ ಬಡವರಿಗೆ ಉತ್ತಮ ಯೋಜನೆಗಳನ್ನು ನೀಡುತ್ತಿದೆ ಆದರೆ ಅದನ್ನು ನಮಗೆ ಸಮರ್ಪಕವಾಗಿ ತಲುಪಿಸುವಲ್ಲಿ ಸರ್ಕಾರಿ ಅಧಿಕಾರಿಗಳು ಎಡವುತ್ತಿದ್ದಾರೆ ಎಂಬುದಾಗಿ ಶೋಭ ಆಚಾರ್ಯ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಾಪು ತಹಶಿಲ್ದಾರ್ ಸಂತೋಷ್‌ರಲ್ಲಿ ಈ ಬಗ್ಗೆ ವಿಚಾರಿಸಿದಾಗ ಬದಲಿ ವ್ಯವಸ್ಥೆ ಕಲ್ಪಿಸಿ ಜನರಿಗಾಗುವ ಸಮಸ್ಯೆ ತಪ್ಪಿಸುವ ಭರವಸೆ ನೀಡಿದ್ದಾರೆ.

Related posts

Leave a Reply

Your email address will not be published. Required fields are marked *