Header Ads
Header Ads
Header Ads
Breaking News

ವಾರಸುದಾರರಿಲ್ಲದ ಮೂರು ಶವಗಳ ಅಂತ್ಯ ಸಂಸ್ಕಾರ ಸಾಮಾಜೀಕ ಧುರೀಣ ವಿಶು ಶೆಟ್ಟಿ ಮುಂದಾಳತ್ವ ಕಾನೂನು ಪ್ರಕ್ರಿಯೆ ಮುಗಿದ ಬಳಿಕ ದಫನ ಕ್ರಿಯೆ

ಅಜ್ಜಕಾರಕಾಡು ಜಿಲ್ಲಾಸ್ಪತ್ರೆಯ ಶೀತಲೀಕೃತ ಶವಗಾರದಲ್ಲಿ ರಕ್ಷಿಸಿಡಲಾಗಿದ್ದ, ಮೂರು ಅಪರಿಚಿತ ಶವಗಳ ವಾರಸುದಾರರು ಬಾರದ ಕಾರಣ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ ಮುಂದಾಳತ್ವದಲ್ಲಿ ಕಾನೂನು ಪ್ರಕ್ರೀಯೆ ನಡೆದ ಬಳಿಕ, ಬೀಡಿನಗುಡ್ಡೆ ಹಿಂದು ರುದ್ರಭೂಮಿಯಲ್ಲಿ ನ.16 ರಂದು ನಡೆಸಲಾಯಿತು.

ಉಡುಪಿ ನಗರ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 45 ವರ್ಷ ಹಾಗೂ 60 ವರ್ಷ ಪ್ರಾಯದ ಎರಡು ಪುರಷರ ಅಪರಿಚಿತ ಶವಗಳು ಪತ್ತೆಯಾಗಿದ್ದವು. ಹಾಗೂ ಮಲ್ಪೆ ಠಾಣೆ ವ್ಯಾಪ್ತಿಯಲ್ಲಿ ಅನಾರೋಗ್ಯ ಪೀಡಿತನಾಗಿ ಸಾರ್ವಜನಿಕ ಸ್ಥಳದಲ್ಲಿ ಬಿದ್ದು ಕೊಂಡಿದ್ದ, ಸುಮಾರು 35 ವರ್ಷ ಪ್ರಾಯದ ಯುವಕನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲು ಪಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗಿ ಯುವಕ ಮೃತ ಪಟ್ಟಿದ್ದ. ಮೂರು ಶವಗಳ ವಾರಸುದಾರರು ಬರುವಿಕೆಗಾಗಿ ಮಾಧ್ಯಮ ಪ್ರಕಟಣೆ ನೀಡಲಾಗಿತ್ತು. ಕಾಲಮಿತಿ ಕಳೆದರೂ ಯಾರು ಬಾರದ ಕಾರಣ, ಉಡುಪಿ ನಗರ ಠಾಣೆ ಹಾಗೂ ಮಲ್ಪೆ ಠಾಣೆಯ ಪೊಲೀಸರ ಸಮಕ್ಷಮದಲ್ಲಿ ಶವಗಳ ದಫನ ಕಾರ್ಯ ನಡೆಸಲಾಯಿತು.

ಶವಗಳ ಅಂತ್ಯ ಸಂಸ್ಕಾರಗಳಿಗೆ ತಗುಲಿದ ವೆಚ್ಚವನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಭರಿಸಿದರು. ಇದುವರೆಗೆ 73 ಅಪರಿಚಿತ ಶವಗಳ ಸಂಸ್ಕಾರವನ್ನು ವಿಶು ಶೆಟ್ಟಿ ಅವರು ನೆರವೇರಿಸಿದ್ದಾರೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ , ಶವಗಳ ರುದ್ರಭೂಮಿಗೆ ಸಾಗಿಸಲು, ಉಚಿತ ಅಂಬುಲೇನ್ಸ್ ಸೇವೆ ನೀಡಿತು. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ದಫನ ಕಾರ್ಯದಲ್ಲಿ ಪೊಲೀಸ್ ಇಲಾಖೆಗೆ ಶ್ರಮದಾನ ಮೂಲಕ ಸಹಕಾರ ನೀಡಿದರು.
ವರದಿ: ಪಲ್ಲವಿ ಸಂತೋಷ್

Related posts

Leave a Reply