Header Ads
Header Ads
Breaking News

*ವಾರಸುದಾರರಿಲ್ಲದ ಶವಸಂಸ್ಕಾರ ಗೌರವಯುತವಾಗಿ ನಡೆಸಿದ ವಿಶು ಶೆಟ್ಟಿ.*

ಉಡುಪಿಯ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅಪರಿಚಿತ ವೃದ್ಧ, ಪುರುಷ, ಮತ್ತು ಮಹಿಳೆಯ ಸೇರಿ ಮೂವರ ಶವಸಂಸ್ಕಾರ ಏಕಕಾಲದಲ್ಲಿ ನಡೆಸುವ ಮೂಲಕ, ಇದುವರೆಗೆ ವಾರಸುದಾರರಿಲ್ಲದ 54 ನೇ ಶವದ ಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತರ ಸಹಕಾರದಿಂದ ನೆರವೇರಿಸಿದರು.ಸುಮಾರು 45 ವರ್ಷದ ಅಪರಿಚಿತ ಮಹಿಳೆ ಅಸೌಖ್ಯದಿಂದ ನಿಟ್ಟೂರು ರಾಷ್ಟ್ರೀಯ ಹೆದ್ದಾರಿ ಬಳಿ ಬಿದ್ದು ಕೊಂಡಿದ್ದಳು. ಅಂದಾಜು 40 ವರ್ಷದ ಅಪರಿಚಿತ ಗಂಡಸು ಅಸೌಖ್ಯದಿಂದ ನಗರದ ಸರ್ವಿಸ್ ಬಸ್ಸು ನಿಲ್ಧಾಣದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ. ಕೊರಂಗ್ರಪಾಡಿ ಬೈಲೂರಿನಲ್ಲಿ ರಸ್ತೆ ಬದಿಯಲ್ಲಿ ಅಸ್ವಸ್ಥನಾಗಿ 65 ವರ್ಷದ ವೃದ್ಧನೊರ್ವ ಬಿದ್ದುಕೊಂಡಿದ್ದರು. ಈ ಅಪರಿಚಿತರಾದ ಮೂವರನ್ನು ಸಾರ್ವಜನಿಕರು ನೀಡಿದ ಮಾಹಿತಿಯ ಮೆರೆಗೆ ಸಮಾಜಸೇವಕ ವಿಶು ಶೆಟ್ಟಿ ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಮೂವರ ದೈಹಿಕ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆಗೆ ಫಲಕಾರಿಯಾಗದೆ ಬೇರೆ ಬೇರೆ ಕಾಲದಲ್ಲಿ ಮೃತಪಟ್ಟಿದ್ದರು.ವಾರಸುದಾರರ ಬರುವಿಕೆಗಾಗಿ ಶವವನ್ನು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇಡಲಾಗಿತ್ತು. ಮೃತರ ಭಾವಚಿತ್ರ, ಚಹರೆ ಸುಳಿವುಗಳ ನೀಡಿ, ಮಾಧ್ಯಮ ಪ್ರಕಟಣೆ ನೀಡಿಯೂ, ಕಾನೂನು ಪ್ರಕಾರದ ಕಾಯುವಿಕೆಯ ಕಾಲಮಿತಿ ಕಳೆದರೂ ವಾರಸುದಾರರು ಯಾರು ಬಾರದ ಕಾರಣ, ಶವಪರೀಕ್ಷೆ- ಮಹಜರು ಕಾನೂನು ಪ್ರಕ್ರೀಯೆಗಳ ನಡೆದನಂತರ, ಮೂರು ಶವಗಳ ಶವಸಂಸ್ಕಾರವನ್ನು ಸಮಾಜಸೇವಕ ವಿಶು ಶೆಟ್ಟಿ ಅವರ ಮುಂದಾಳತ್ವದಲ್ಲಿ ಸಾಮಾಜಿಕ ಸೇವಾಕರ್ತ ತಾರಾನಾಥ್ ಮೇಸ್ತರ ಶ್ರಮದಾನ ಅಂಬುಲೇನ್ಸ್ ಚಾಲಕರ ಸಹಕಾರದ ಮುಖಾಂತರ ಪೊಲೀಸರ ಸಮಕ್ಷಮದಲ್ಲಿ ಮೇ, 25 ರಂದು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಕಾನೂನು ನಿಯಮದಂತೆ ದಫನರೂಪದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಶವಸಂಸ್ಕಾರಕ್ಕೆ ತಗುಲಿದ ಸಂಪೂರ್ಣ ವೆಚ್ಚವನ್ನು ವಿಶು ಶೆಟ್ಟಿ ಅವರು ಭರಿಸಿದರು. ಇದುವರೆಗೆ 54 ವಾರಸುದಾರಿಲ್ಲದ ಶವಸಂಸ್ಕಾರ ಅವರು ನೆಡೆಸಿದ್ದು ಉಲ್ಲೇಖನಿಯವಾಗಿದೆ.ಶವಗಾರದ ಪ್ರಾಂಗಣದಲ್ಲಿ ಪಾರ್ಥಿವ ಶರೀರಗಳಿಗೆ ಆರಕ್ಷಕರು, ಸಾಮಾಜಿಕ ಕಾರ್ಯಕರ್ತರು, ನಾಗರಿಕರು ಪುಷ್ಪಮಾಲೆ ಸಮರ್ಪಣೆ ಮಾಡುವ ಮುಖಾಂತರ ಅಂತಿಮ ಗೌರವ ಸಲ್ಲಿಸಿದರು. ನಂತರ ಮೂರು ಶವವಾಹನಗಳು, ಸಾಮಾಜಿಕ ಕಾರ್ಯಕರ್ತರ ವಾಹನಗಳು ಸೇರಿಕೊಂಡು ಶವಯಾತ್ರೆ ಬೀಡಿನಗುಡ್ಡೆ ಹಿಂದು ರುದ್ರಭೂಮಿಯತ್ತ ಸಾಗಿತು. ಸಾರ್ವಜನಿಕರು ರಸ್ತೆ ಬದಿಗಳಲ್ಲಿ ನಿಂತು ಕೊಂಡು ಶವಯಾತ್ರೆ ವಿಕ್ಷಿಸಿದರು. ವಿಕ್ಷಕರ ಮುಖಭಾವದಲ್ಲಿ ಶೋಕಛಾಯೆ ಏದ್ದು ಕಾಣುತಿತ್ತು.

ವರದಿ: ಪಲ್ಲವಿ ಸಂತೋಷ್

Related posts

Leave a Reply