Breaking News

ವಾಷಿಂಗ್ಟನ್‌ನಲ್ಲಿ ರಸ್ತೆಯಲ್ಲಿ ಬೆಂಕಿಯುಂಡೆಯಾದ ವಿಮಾನ, ಅಚ್ಚರಿಯೆಂಬಂತೆ ಪಾರಾದ ಪೈಲಟ್ ಮತ್ತು ಜನ

ಟ್ರಾಫಿಕ್ ಸಿಗ್ನಲ್ನಲ್ಲಿ ಕಾರುಗಳೆಲ್ಲ ಸಾಲಾಗಿ ನಿಂತು, ಸಿಗ್ನಲ್ ಓಪನ್ ಆಗಲು ಕಾಯುತ್ತಿವೆ. ಅಷ್ಟರಲ್ಲಿ ವಿಮಾನವೊಂದು, ಏಕಾ‌ಏಕಿ ಇದೇ ರಸ್ತೆಯತ್ತ ಇಳಿದು ಬರುತ್ತಿದೆ. ಅರೆ, ಇದೇನಿದು ಎಂದು ನೋಡುವಷ್ಟರಲ್ಲಿ, ವಿಮಾನ ಬೆಂಕಿಯುಂಡೆಯಾಗಿ ರಸ್ತೆಯಲ್ಲೇ ಪತನಗೊಳ್ಳುತ್ತದೆ.
ಇದು ಸಿನಿಮಾದ ದೃಶ್ಯವಲ್ಲ, ವಾಷಿಂಗ್ಟನ್ನಲ್ಲಿ ಕಾರು ಚಾಲಕರ ಕಣ್ಣೆದುರೇ ನಡೆದ ಘಟನೆ. ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪೈಲಟ್ ವಿಮಾನವನ್ನು ಕೆಳಗಿಳಿಸಲು ಯೋಚಿಸಿದ. ಖಾಲಿ ಜಾಗ ಕಂಡ ಕೂಡಲೇ ಲ್ಯಾಂಡಿಂಗ್ಗೆ ಪ್ರಯತ್ನಿಸಿದ. ಕೆಳಗಿಳಿಯುವಷ್ಟರಲ್ಲಿ ವಿದ್ಯುತ್ ತಂತಿಯೊಂದು ವಿಮಾನಕ್ಕೆ ತಗುಲಿ, ಆಗಸದಲ್ಲೇ ಬೆಂಕಿಯುಂಡೆಯಾದ ವಿಮಾನ ಜನಜಂಗುಳಿಯಿರುವ ರಸ್ತೆಯಲ್ಲಿ ಪತನಗೊಂಡಿತು. ಆದರೆ, ಪೈಲಟ್ ಮತ್ತು ಪ್ರಯಾಣಿಕರು ಅಚ್ಚರಿಯ ರೀತಿಯಲ್ಲಿ ಪಾರಾಗಿದ್ದಾರೆ.

Related posts

Leave a Reply