Header Ads
Header Ads
Breaking News

ವಾಹನ ತಪಾಸಣೆ ಮಧ್ಯೆ ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿ: ಆಕ್ರೋಶಿತರಾದ ಊರವರ ಕಲ್ಲೇಟಿನಿಂದ ಎಸ್‌ ಐ ಗೆ ಗಾಯ

ಮಂಜೇಶ್ವರ ಸಮೀಪದ ಉದ್ಯಾವರದಲ್ಲಿ ಹೈವೇ ಪೊಲೀಸರ ವಾಹನ ತಪಾಸಣೆ ಮಧ್ಯೆ ಬೈಕಿಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಕ್ರೋಶಿತರಾದ ಊರವರು ಎಸೆದ ಕಲ್ಲೇಟಿನಿಂದ ಕರ್ತವ್ಯದಲ್ಲಿದ್ದ ಎಸ್ಸೈ ಯೊಬ್ಬರು ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಂಜೇಶ್ವರಕ್ಕೆ ಸಮೀಪದ ಹತ್ತನೇ ಮೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದರಿಯ ತಿರುಗು ರಸ್ತೆಯಲ್ಲಿ ವಾಹನ ತಪಸಣೆ ನಡೆಸುತ್ತಿರುವ ಮಧ್ಯೆ ಹೆಲ್ಮೇಟ್ ಧರಿಸದೇ ಆಗಮಿಸಿದ ಬೈಕ್ ಸವಾರನನ್ನು ನಿಲ್ಲಿಸುವಂತೆ ಪೊಲೀಸರು ಕೈ ಸನ್ನೇ ತೋರಿಸಿದರೂ ನಿಲ್ಲಿಸದೆ ಮುಂದಕ್ಕೆ ಸಾಗಿ ತಿರುಗಿ ಪೊಲೀಸರನ್ನು ನೋಡುತ್ತಿರುವ ಮಧ್ಯೆ ಎದುರಿನಿಂದ ಆಗಮಿಸಿದ ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ.
ಇದರಿಂದ ಆಕ್ರೋಶಿತರಾದ ಊರವರು ಪೊಲೀಸರನ್ನು ಸುತ್ತುವರಿದು ಮತಿಗೆ ಮಾತು ಬೆಳೆದಾಗ ಯಾರೋ ಎಸೆದೆ ಕಲ್ಲೊಂದು ಕರ್ತವ್ಯದಲ್ಲಿದ್ದ ಎಸ್ ಐ ನಾರಾಯಣ (48) ಎಂಬವರ ತಲೆಗೆ ಬಿದ್ದು ಗಾಯಗಳಾಗಿವೆ. ಗಾಯಗೊಂಡ ಎಸ್ಸೈಯನ್ನು ಮಂಗಲ್ಪಾಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.