Header Ads
Header Ads
Breaking News

ವಿಂಬಲ್ಡನ್ ಟೆನ್ನಿಸ್ ಲಂಡನ್, ವೀನಸ್, ಮುಗುರುಜಾ ಮಹಿಳಾ ಫೈನಲ್

ಗಾರ್ಬಿನ್ ಮುಗುರುಜಾ ಅವರು ನೇರ ಸೆಟ್ಗಳ ಹೋರಾಟದಲ್ಲಿ ಮಗ್ಡಲೆನಾ ರಿಬರಿಕೋವಾ ಅವರನ್ನು ಉರುಳಿಸಿ ವಿಂಬಲ್ಡನ್ ಟೆನಿಸ್ ಕೂಟದ ಫೈನಲ್ ಹಂತಕ್ಕೇರಿದರು. ಅವರು ವಿಂಬಲ್ಡನ್ನಲ್ಲಿ ಫೈನಲಿಗೇರಿರುವುದು ಇದು ಎರಡನೇ ಸಲವಾಗಿದೆ.
ಗ್ರ್ಯಾನ್ ಸ್ಲಾಮ್ ಕೂಟದಲ್ಲಿ ಮೂರನೇ ಬಾರಿ ಫೈನಲಿಗೇರಿದ್ದ ೧೪ನೇ ಶ್ರೇಯಾಂಕದ ಮುಗುರುಜಾ ೬-೧, ೬-೧ ನೇರ ಸೆಟ್ಗಳಿಂದ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ತಲುಪಿದರು. ೨೦೧೫ರ ವಿಂಬಲ್ಡನ್ ಫೈನಲ್ನಲ್ಲಿ ಸೆರೆನಾಗೆ ಶರಣಾಗಿದ್ದ ಮುಗುರುಜಾ ಶನಿವಾರದ ಫೈನಲ್ನಲ್ಲಿ ಐದು ಬಾರಿಯ ಚಾಂಪಿಯನ್ ವೀನಸ್ ವಿಲಿಯಮ್ಸ್ ಅವರನ್ನು ಎದುರಿಸಲಿದ್ದಾರೆ. ವೀನಸ್ ದಿನದ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಬ್ರಿಟನ್ನ ಜೋಹಾನಾ ಕೊಂಟಾ ಅವರನ್ನು ೬-೪, ೬-೨ ಸೆಟ್ಗಳಿಂದ ಸೋಲಿಸಿದರು.
ಖಂಡಿತವಾಗಿಯೂ ನಾನು ಚೆನ್ನಾಗಿ ಆಡಿದ್ದೇನೆ. ಬಹಳಷ್ಟು ಆತ್ಮವಿಶ್ವಾಸದೊಂದಿಗೆ ಅಂಗಣಕ್ಕೆ ಇಳಿದಿದ್ದೆ ಮತ್ತು ಎಲ್ಲವೂ ಎನಿಸಿದಂತೆ ನಡೆಯಿತು ಎಂದು ಪಂದ್ಯದ ಬಳಿಕ ಮುಗುರುಜಾ ಹೇಳಿದರು. ಕಳೆದ ವರ್ಷ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ತನ್ನ ಬಾಳ್ವೆಯ ಚೊಚ್ಚಲ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಪಡೆದ ಮುಗುರುಜಾ ಆಬಳಿಕ ನೀರಸವಾಗಿ ಆಡಿದ್ದರಿಂದ ರ್ಯಾಂಕಿಂಗ್ನಲ್ಲಿ ಅಗ್ರ ೧೦ಕ್ಕಿಂತ ಹೊರಗಿನ ಸ್ಥಾನಕ್ಕೆ ಕುಸಿದಿದ್ದರು. ಆದರೆ ಇದೀಗ ಹುಲ್ಲುಹಾಸಿನ ಅಂಗಣಗಳಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಮುಗುರುಜಾ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಅವರು ವಿಂಬಲ್ಡನ್ ಪ್ರಶಸ್ತಿ ಗೆದ್ದರೆ ಅಗ್ರ ಐದರೊಳಗಿನ ಸ್ಥಾನಕ್ಕೇರುವ ಸಾಧ್ಯತೆಯಿದೆ.
ಫೈನಲ್ ಹಂತಕ್ಕೇರುವ ಮೂಲಕ ವೀನಸ್ ಅವರು ೧೯೯೪ರಲ್ಲಿ ಮಾರ್ಟಿನಾ ನವ್ರಾಟಿಲೋವಾ ಬಳಿಕ ವಿಂಬಲ್ಡನ್ ಫೈನಲಿಗೇರಿದ ಅತೀ ಹಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದಾರೆ.

Related posts

Leave a Reply